×
Ad

ಪ್ರಧಾನಿ ಅವರು ಈಗ ‘ವ್ಯಾಟ್ಸ್ಆ್ಯಪ್ ಚಾನೆಲ್’ ನಲ್ಲಿ

Update: 2023-09-19 23:08 IST

Photo: ANI 

ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಅವರು ಈಗ ವ್ಯಾಟ್ಸ್ಆ್ಯಪ್ ನಲ್ಲಿ ಲಭ್ಯವಿದ್ದಾರೆ. ವ್ಯಾಟ್ಸ್ಆ್ಯಪ್ ನಲ್ಲಿ ತನ್ನ ಬೆಂಬಲಿಗರೊಂದಿಗೆ ನೆರವಾಗಿ ಸಂವಹನ ನಡೆಸಲು ಅವಕಾಶ ಒದಗಿಸುವ ವ್ಯಾಟ್ಸ್ಆ್ಯಪ್ ನೂತನ ಆವೃತ್ತಿಯಾಗಿರುವ ‘ವ್ಯಾಟ್ಸ್ಆ್ಯಪ್ ಚಾನೆಲ್’ ಅನ್ನು ಪ್ರಧಾನಿ ಅವರು ಆಯ್ಕೆ ಮಾಡಿಕೊಂಡಿದ್ದಾರೆ.

ವ್ಯಾಟ್ಸ್ಆ್ಯಪ್ ನ ಈ ನೂತನ ಆವೃತ್ತಿಯು ತಮ್ಮ ಬೆಂಬಲಿಗರಿಗೆ ಸಂದೇಶವನ್ನು ಪ್ರಸಾರ ಮಾಡಲು ಬಯಸುವ ಸಾರ್ವಜನಿಕ ವ್ಯಕ್ತಿಗಳು ಹಾಗೂ ಉದ್ಯಮಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಧಾನಿ ಮೋದಿ ಅವರು ವ್ಯಾಟ್ಸ್ಆ್ಯಪ್ ಚಾನೆಲ್ ನಲ್ಲಿ ಮೊದಲ ಬಾರಿಗೆ ನೂತನವಾಗಿ ನಿರ್ಮಾಣ ಮಾಡಲಾದ ಸಂಸತ್ ಭವನದ ಒಳಭಾಗದ ಚಿತ್ರ ಹಾಗೂ ಸ್ವಾಗತಿಸುವ ಕುರಿತು ಕ್ಯಾಪ್ಶನ್ ಪೋಸ್ಟ್ ಮಾಡಿದ್ದಾರೆ.

‘‘ವ್ಯಾಟ್ಸ್ಆ್ಯಪ್ ಕಮ್ಯೂನಿಟಿಗೆ ಸೇರಿರುವುದು ರೋಮಾಂಚನವುಂಟು ಮಾಡಿದೆ. ಇದು ನಮ್ಮ ನಿರಂತರ ಸಂವಹನದ ಯಾತ್ರೆಯಲ್ಲಿ ಇನ್ನಷ್ಟು ಹತ್ತಿರುವಾಗುವಲ್ಲಿ ಇನ್ನೊಂದು ಹೆಜ್ಜೆ. ಇಲ್ಲಿ ಸಂಪರ್ಕದಲ್ಲಿರೋಣ. ಇಲ್ಲಿದೆ ನೂತನ ಸಂಸತ್ ಭವನದ ಚಿತ್ರ” ಎಂದು ಅವರು ಕ್ಯಾಪ್ಶನ್ ನಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News