×
Ad

ಬಿಹಾರದಲ್ಲಿ ರೈಲು ಅಪಘಾತ: ಕನಿಷ್ಠ ನಾಲ್ವರ ಮೃತ್ಯು,ಹಲವರಿಗೆ ಗಾಯ

Update: 2023-10-12 21:37 IST

photo: PTI 

ಬಕ್ಸಾರ್: ದಿಲ್ಲಿ-ಕಾಮಾಖ್ಯ ಈಶಾನ್ಯ ಎಕ್ಸ್‌ಪ್ರೆಸ್ ಹಲವಾರು ಬೋಗಿಗಳು ಬಿಹಾರದ ಬಕ್ಸಾರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಸಮೀಪ ಬುಧವಾರ ತಡರಾತ್ರಿ ಹಳಿತಪ್ಪಿದ್ದು, ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಈ ಅವಘಡದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದು, 21 ರೈಲುಗಳ ಸಂಚಾರ ಮಾರ್ಗಗಳನ್ನು ಬದಲಿಸಿದೆ.

ರಾತ್ರಿ 9:53ಕ್ಕೆ ಅಪಘಾತ ಸಂಭವಿಸಿದ್ದು, ಕನಿಷ್ಠ ಎರಡು ಏಸಿ ಬೋಗಿಗಳು ಉರುಳಿಬಿದ್ದಿದ್ದು, ನಾಲ್ಕು ಬೋಗಿಗಳು ಹಳಿ ತಪ್ಪಿದ್ದವು.

ಗಂಭೀರವಾಗಿ ಗಾಯಗೊಂಡಿರುವವರನ್ನು ಪಾಟ್ನಾ ಏಮ್ಸ್‌ಗೆ ದಾಖಲಿಸಲಾಗಿದೆ.

23 ಬೋಗಿಗಳನ್ನು ಹೊಂದಿದ್ದ ಈಶಾನ್ಯ ಎಕ್ಸ್‌ಪ್ರೆಸ್ ಬುಧವಾರ ಬೆಳಿಗ್ಗೆ 7:40 ಗಂಟೆಗೆ ದಿಲ್ಲಿಯ ಆನಂದ ವಿಹಾರ ನಿಲ್ದಾಣದಿಂದ ಅಸ್ಸಾಮಿನ ಕಾಮಾಖ್ಯಕ್ಕೆ ಸುಮಾರು 33 ಗಂಟೆಗಳ ಪ್ರಯಾಣವನ್ನು ಆರಂಭಿಸಿತ್ತು.

ಅಪಘಾತ ಸಂಭವಿಸಿದ ತಕ್ಷಣ ಪ್ರಯಾಣಿಕರನ್ನು ರಕ್ಷಿಸಲು ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿದ್ದರು.

ರೈಲ್ವೆ ಇಲಾಖೆಯು ಗುರುವಾರ ಅವಘಡದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News