×
Ad

ಕಾಲ್ತುಳಿತ ಪ್ರಕರಣ: ನಟ ಅಲ್ಲು ಅರ್ಜುನ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಗುಂಪು

Update: 2024-12-22 18:49 IST

PC : X/PTI

ಹೈದರಾಬಾದ್: ಗುಂಪೊಂದು ರವಿವಾರ ಹೈದರಾಬಾದ್ ನಲ್ಲಿರುವ ನಟ ಅಲ್ಲು ಅರ್ಜುನ್ ಅವರ ನಿವಾಸಕ್ಕೆ ನುಗ್ಗಿ, ಹೂಕುಂಡ ಇತ್ಯಾದಿಗಳನ್ನು ಧ್ವಂಸಗೊಳಿಸಿದೆ ಎಂದು ವರದಿಯಾಗಿದೆ.

ಅಲ್ಲು ಅರ್ಜುನ್ ಅವರ ಕಾಂಪೌಂಡ್ ಮೇಲೆ ಹತ್ತಿರುವ ಪ್ರತಿಭಟನಾಕಾರರು, ಅವರ ನಿವಾಸದ ಮೇಲೆ ಟೊಮೆಟೊಗಳನ್ನು ಎಸೆದಿದ್ದಾರೆ. ನಂತರ ಅವರು ಅಲ್ಲು ಅರ್ಜುನ್ ನಿವಾಸದ ಆವರಣ ಪ್ರವೇಶಿಸಿ, ಅಲಂಕಾರಿಕ ಸಸ್ಯಗಳನ್ನು ಹಾನಿಗೊಳಿಸಿದ್ದಾರೆ. ನಟ ಅಲ್ಲು ಅರ್ಜುನ್ ವಿರುದ್ಧ ಘೋಷಣೆಗಳನ್ನು ಕೂಗಿ, ಸ್ಥಳದಲ್ಲಿ ಉದ್ರಿಕ್ತ ವಾತಾವರಣವನ್ನು ನಿರ್ಮಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಚಿತ್ರಮಂದಿರವೊಂದರಲ್ಲಿ ಪುಷ್ಪ-2 ಪ್ರದರ್ಶನ ವೇಳೆ ಸಂಭವಿಸಿದ್ದ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದ ಮಹಿಳೆಯ ಪರವಾಗಿ ಪ್ರತಿಭಟನಾಕಾರರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರತಿಭಟನಾಕಾರರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಚಿತ್ರಮಂದಿರಕ್ಕೆ ಚಿತ್ರ ತಂಡದ ಸದಸ್ಯರು ಭೇಟಿ ನೀಡಲು ಪೊಲೀಸರು ಅನುಮತಿಯನ್ನು ತಡೆ ಹಿಡಿದರೂ, ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ನಟ ಅಲ್ಲು ಅರ್ಜುನ್ ಅವರನ್ನು ಶನಿವಾರ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಟೀಕಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News