×
Ad

ಬುಡಕಟ್ಟು ನಾಯಕ ವಿಷ್ಣು ದಿಯೋ ಸಾಯಿಗೆ ಛತ್ತೀಸ್‌ಗಡದ ನೂತನ ಸಿಎಂ ಪಟ್ಟ

Update: 2023-12-10 16:03 IST

 ವಿಷ್ಣು ದಿಯೋ | Photo: PTI 

ಹೊಸದಿಲ್ಲಿ : ಬುಡಕಟ್ಟು ಸಮುದಾಯದ ನಾಯಕ ವಿಷ್ಣು ದಿಯೋ ಸಾಯಿ ಅವರನ್ನು ಬಿಜೆಪಿ ಛತ್ತೀಸ್‌ಗಡದ ನೂತನ ಸಿಎಂ ಆಗಿ ಆಯ್ಕೆ ಮಾಡಿದೆ ಎಂದು NDTV ವರದಿ ಮಾಡಿದೆ.

ರಾಯ್‌ಪುರದಲ್ಲಿ ರವಿವಾರ ನಡೆದ ಬಿಜೆಪಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಬಿಜೆಪಿ ನೇಮಿಸಿದ್ದ ವೀಕ್ಷಕರ ಅಭಿಪ್ರಾಯದ ಮೇರೆಗೆ ವಿಷ್ಣು ದಿಯೋ ಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ.

ರಾಯ್‌ಪುರದಲ್ಲಿ ಬಿಜೆಪಿಯಿಂದ ಹೊಸದಾಗಿ ಚುನಾಯಿತರಾದ 54 ಶಾಸಕರ ಪ್ರಮುಖ ಸಭೆಯ ನಂತರ ಛತ್ತೀಸ್‌ಗಡ ಮುಖ್ಯಮಂತ್ರಿಯಾಗಿ ವಿಷ್ಣು ದಿಯೋ ಸಾಯಿ ಅವರನ್ನು ಘೋಷಿಸಲಾಯಿತು.

2020 ರಿಂದ 2022ರವರೆಗೆ ಛತ್ತೀಸ್‌ಗಡದ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ವಿಷ್ಣು ದಿಯೋ ಸಾಯಿ, ನರೇಂದ್ರ ಮೋದಿಯವರ ಮೊದಲ ಅಧಿಕಾರಾವಧಿಯಲ್ಲಿ ಉಕ್ಕಿನ ಖಾತೆಯ ರಾಜ್ಯ ಸಚಿವರಾಗಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News