×
Ad

ಲಡಾಖ್ | ಸೇನಾ ವಾಹನದ ಮೇಲೆ ಬಂಡೆ ಬಿದ್ದು ಇಬ್ಬರು ಯೋಧರು ಹುತಾತ್ಮ

Update: 2025-07-30 20:14 IST

Credit: X/@firefurycorps

ಹೊಸದಿಲ್ಲಿ: ಲಡಾಖ್‌ನ ಲೇಹ್ ಜಿಲ್ಲೆಯಲ್ಲಿ ಮಿಲಿಟರಿ ಬೆಂಗಾವಲು ವಾಹನದ ಮೇಲೆ ಬಂಡೆಯೊಂದು ಉರುಳಿ ಬಿದ್ದು ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಹುತಾತ್ಮ ಇಬ್ಬರು ಸೈನಿಕರನ್ನು ಲೆಫ್ಟಿನೆಂಟ್ ಕರ್ನಲ್ ಭಾನು ಪ್ರತಾಪ್ ಸಿಂಗ್ ಮತ್ತು ಲ್ಯಾನ್ಸ್ ದಫಾದರ್ ದಲ್ಜೀತ್ ಸಿಂಗ್ ಎಂದು ಗುರುತಿಸಲಾಗಿದೆ.

ಲೇಹ್‌ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಗಾಲ್ವಾನ್‌ನ ಡರ್ಬುಕ್ ಬಳಿಯ ಚಾರ್ಬಾಗ್‌ನಲ್ಲಿ ದೊಡ್ಡ ಬಂಡೆಯೊಂದು ಉರುಳಿ ಮಿಲಿಟರಿ ಬೆಂಗಾವಲು ವಾಹನದ ಮೇಲೆ ಬಿದ್ದಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಭಾರತೀಯ ಸೇನೆಯ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಲಡಾಖ್‌ನಲ್ಲಿ ಕರ್ತವ್ಯದ ವೇಳೆ ಲೆಫ್ಟಿನೆಂಟ್ ಕರ್ನಲ್ ಭಾನು ಪ್ರತಾಪ್ ಸಿಂಗ್ ಮಂಕೋಟಿಯಾ ಮತ್ತು ಲ್ಯಾನ್ಸ್ ದಫದಾರ್ ದಲ್ಜಿತ್ ಸಿಂಗ್ ಹುತಾತ್ಮರಾಗಿದ್ದಾರೆ. ಈ ದುಃಖದ ಸಮಯದಲ್ಲಿ ಮೃತ ಕುಟುಂಬಗಳಿಗೆ ಆಳವಾದ ಸಂತಾಪವನ್ನು ಸೂಚಿಸುತ್ತೇವೆ ಎಂದು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News