×
Ad

ಉತ್ತರ ಪ್ರದೇಶ | ಫೆಲೆಸ್ತೀನ್ ಧ್ವಜ ಹಾರಿಸಿದ ವಿದ್ಯುತ್ ಇಲಾಖೆ ಸಿಬ್ಬಂದಿ ಕರ್ತವ್ಯದಿಂದ ವಜಾ

Update: 2025-04-07 10:36 IST

ಸಾಂದರ್ಭಿಕ ಚಿತ್ರ | AFP

ಉತ್ತರ ಪ್ರದೇಶ : ಈದ್ ಹಬ್ಬದ ದಿನ ಯುದ್ಧಪೀಡಿತ ಫೆಲೆಸ್ತೀನ್‌ಗೆ ಒಗ್ಗಟ್ಟನ್ನು ಪ್ರದರ್ಶಿಸಿ ಧ್ವಜ ಹಾರಿಸಿದ ವಿದ್ಯುತ್ ಇಲಾಖೆಯ ಗುತ್ತಿಗೆ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.

ಕೈಲಾಸಪುರದ ಸಾಕಿಬ್ ಖಾನ್ ವಜಾಗೊಂಡ ವಿದ್ಯುತ್ಇ ಲಾಖೆಯ ಗುತ್ತಿಗೆ ಕಾರ್ಮಿಕ. ಈದ್ ದಿನ ಫೆಲೆಸ್ತೀನ್ ಜೊತೆ ಒಗ್ಗಟ್ಟನ್ನು ಪ್ರದರ್ಶಿಸುವ ಭಾಗವಾಗಿ ಫೆಲೆಸ್ತೀನ್ ಧ್ವಜವನ್ನು ಬೀಸಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತ ಪೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಸಾಕಿಬ್ ಅವರ ವಜಾಕ್ಕೆ ಕಾರಣ ಉಲ್ಲೇಖಿಸಿದ ವಿದ್ಯುತ್ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವ್ ಕುಮಾರ್, ಇಲಾಖೆಯು ಸಾಕಿಬ್ ಖಾನ್ ನಡೆಯನ್ನು ದೇಶವಿರೋಧಿ ಎಂದು ಪರಿಗಣಿಸಿದೆ. ಸಂಬಂಧಪಟ್ಟ ಗುತ್ತಿಗೆ ಕಂಪೆನಿಗೆ ಪತ್ರವನ್ನು ಕೂಡ ಬರೆಯಲಾಗಿದೆ. ಖಾನ್ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News