×
Ad

ಉತ್ತರ ಪ್ರದೇಶ | ಹೋಳಿ ಹಬ್ಬದಂದು ಮುಸ್ಲಿಂ ಪುರುಷರು ಟಾರ್ಪಾಲಿನ್‌ನಿಂದ ಮುಚ್ಚಿಕೊಳ್ಳಿ : ಸಚಿವ ರಘುರಾಜ್ ಸಿಂಗ್ ವಿವಾದ

Update: 2025-03-11 16:14 IST

ರಘುರಾಜ್ ಸಿಂಗ್ Photo | X \ @ThRaghurajSingh

ಲಕ್ನೋ : ಹೋಳಿ ಹಬ್ಬದಂದು ಪ್ರಾರ್ಥನೆಗೆ ಹೊರಡುವಾಗ ಬಣ್ಣಗಳನ್ನು ಎರಚುವುದನ್ನು ತಪ್ಪಿಸಲು ಮುಸ್ಲಿಂ ಪುರುಷರು ಟಾರ್ಪಾಲಿನ್‌ನಿಂದ ಮುಚ್ಚಿಕೊಳ್ಳಬೇಕೆಂದು ಹೇಳಿ ಉತ್ತರ ಪ್ರದೇಶದ ಸಚಿವ ರಘುರಾಜ್ ಸಿಂಗ್ ವಿವಾದವನ್ನು ಸೃಷ್ಟಿಸಿದ್ದಾರೆ.

ಈ ವರ್ಷ ಹೋಳಿ ಹಬ್ಬವು ರಮಝಾನ್ ತಿಂಗಳ 2ನೇ ಶುಕ್ರವಾರ ಬರಲಿದೆ. ಸನಾತನ ಧರ್ಮದ ಅನುಯಾಯಿಗಳಿಗೆ ಹೋಳಿ ಹಬ್ಬವು ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ಮಸೀದಿಗಳ ಸಮೀಪವಿರುವ ಕೆಲವು ಪ್ರದೇಶಗಳಲ್ಲಿ ಹೋಳಿ ಆಡಬಾರದು ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದು ರಘುರಾಜ್ ಸಿಂಗ್ ಹೇಳಿದರು.

ಮುಸ್ಲಿಂ ಮಹಿಳೆಯರು ಮುಸುಕುಗಳಿಂದ ಮುಚ್ಚಿಕೊಳ್ಳುತ್ತಾರೆ ಮತ್ತು ಮುಂಜಾಗ್ರತಾ ಕ್ರಮವಾಗಿ ಕೆಲವೊಮ್ಮೆ ಮಸೀದಿಗಳನ್ನು ಟಾರ್ಪಾಲಿನ್‌ಗಳಿಂದ ಮುಚ್ಚಲಾಗುತ್ತದೆ. ಅದರಂತೆ ಮುಸ್ಲಿಂ ಪುರುಷರು ಬಣ್ಣ ಹಾಕುವುದನ್ನು ತಪ್ಪಿಸಲು ಬಯಸಿದರೆ ತಮ್ಮನ್ನು ತಾವು ಟಾರ್ಪಾಲಿನ್‌ಗಳಿಂದ ಮುಚ್ಚಿಕೊಳ್ಳಬಹುದು ಎಂದು ಹೇಳಿದರು.

ಹೋಳಿಗೆ ಅಡ್ಡಿಪಡಿಸುವವರಿಗೆ ಮೂರು ಆಯ್ಕೆಗಳಿವೆ, ಜೈಲಿಗೆ ಹೋಗಿ, ರಾಜ್ಯವನ್ನು ತೊರೆಯಿರಿ ಅಥವಾ ಯಮರಾಜ್ ಬಳಿ ಹೆಸರು ನೋಂದಾಯಿಸಿಕೊಳ್ಳಿ. ಜನರು ಬಹುಸಂಖ್ಯಾತರನ್ನು ಗೌರವಿಸಬೇಕು ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News