ಉತ್ತರ ಪ್ರದೇಶ | ದಲಿತ ವೃದ್ಧನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಐವರ ಬಂಧನ
Update: 2024-06-21 17:56 IST
ಲಕ್ನೋ : ಮೇಲ್ಜಾತಿಗೆ ಸೇರಿದ ಜನರು ಸೇರಿಕೊಂಡು 62 ವಯಸ್ಸಿನ ದಲಿತ ವೃದ್ದರೋರ್ವರಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಘಟನೆ ಉತ್ತರ ಪ್ರದೇಶದ ಕೌಶಾಂಬಿಯ ಬಿರ್ನರ್ ಗ್ರಾಮದಲ್ಲಿ ವರದಿಯಾಗಿದೆ. ಘಟನೆಯ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ. ಕಿರುಕುಳ ನೀಡಿದವರನ್ನು ಮೇಲ್ಜಾತಿಗೆ ಸೇರಿದ ಗ್ರಾಮ ಮುಖ್ಯಸ್ಥರ ಪತಿ ಗುಲಾಬ್‌ಚಂದ್ ಗುಪ್ತಾ ಮತ್ತು ಆತನ ಸಹಚರರರು ಎಂದು ಆರೋಪಿಸಲಾಗಿದೆ.