×
Ad

ಸರಕಾರವನ್ನು ಟೀಕಿಸಿ‌ರುವುದರಿಂದ ವರುಣ್ ಗಾಂಧಿಗೆ ಪಿಲಿಭೀತ್ ಟಿಕೆಟ್ ತಪ್ಪಿರಬಹುದು: ಮೇನಕಾ ಗಾಂಧಿ

Update: 2024-05-11 21:46 IST

ವರುಣ್ ಗಾಂಧಿ,  ಮೇನಕಾ ಗಾಂಧಿ | PC : PTI 


ಹೊಸದಿಲ್ಲಿ: ಕೆಲವೊಮ್ಮೆ ಸರಕಾರವನ್ನು ಟೀಕಿಸಿ ತನ್ನ ಪುತ್ರ ವರುಣ್ ಗಾಂಧಿಯವರ ಬರಹಗಳು ಅವರಿಗೆ ಪಿಲಿಭೀತ್ ಲೋಕಸಭಾ ಕ್ಷೇತ್ರದಿಂದ ಪಕ್ಷದ ಟಿಕೆಟ್ ಕೈತಪ್ಪಲು ಕಾರಣವಾಗಿರಬಹುದು ಎಂದ ಬಿಜೆಪಿ ನಾಯಕಿ ಮೇನಕಾ ಗಾಂಧಿ, ಸಂಸದ ಸ್ಥಾನ ಇಲ್ಲದೆಯೂ ವರುಣ್ ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.

ಉತ್ತರ ಪ್ರದೇಶದ ಸುಲ್ತಾನ್‌ಪುರದ ತನ್ನ ನಿವಾಸದಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಜಿ ಕೇಂದ್ರ ಸಚಿವೆ ಮತ್ತು ಸ್ವಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮೇನಕಾ, ವರುಣ್ ತನ್ನ ಪರವಾಗಿ ಪ್ರಚಾರ ಮಾಡಲು ಬಯಸಿದ್ದಾರೆ. ಆದರೆ ಆ ಬಗ್ಗೆ ಇನ್ನೂ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ತಿಳಿಸಿದರು.

ವರುಣ್ ಗಾಂಧಿಯವರಿಗೆ ಟಿಕೆಟ್ ನಿರಾಕರಿಸಲಾಗಿದ್ದು ಓರ್ವ ತಾಯಿಯಾಗಿ ನಿಮಗೆ ನೋವನ್ನುಂಟು ಮಾಡಿದೆಯೇ ಎಂಬ ಪ್ರಶ್ನೆಗೆ ಮೇನಕಾ,‌ ‘ನಾನು ಸಂತೋಷವಾಗಿದ್ದೇನೆ ಎಂದು ಹೇಳಲಾರೆ, ಆದರೆ ಟಿಕೆಟ್ ಸಿಗದಿದ್ದರೂ ವರುಣ್ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದು ನನಗೆ ಖಚಿತವಿದೆ’ ಎಂದು ಉತ್ತರಿಸಿದರು.

ಈ ಸಲವೂ ಪಿಲಿಭೀತ್ ನಿಂದ ವರುಣರನ್ನು ಕಣಕ್ಕಿಳಿಸಬೇಕಿತ್ತು ಎಂಬ ಅಲ್ಲಿಯ ಜನರ ಅನಿಸಿಕೆಗಳ ಕುರಿತು ಪ್ರಶ್ನೆಗೆ ಅವರು, ಪಕ್ಷವು ನಿರ್ಧಾರವೊಂದನ್ನು ತೆಗೆದುಕೊಂಡಿದೆ, ಅಷ್ಟೇ ಎಂದು ಉತ್ತರಿಸಿದರು.

ಭವಿಷ್ಯದಲ್ಲಿ ವರುಣ್ ಹಿಂದಿನಂತೆ ಸುಲ್ತಾನ್‌ಪುರಕ್ಕೆ ಮರಳುವರೇ ಅಥವಾ ತನ್ನ ‘ಕರ್ಮಭೂಮಿ’ ಪಿಲಿಭೀತ್ ನಲ್ಲಿ ಮುಂದುವರಿಯುವರೇ ಎಂಬ ಪ್ರಶ್ನೆಗೆ ಸದ್ಯಕ್ಕ ಪಿಲಿಭಿಟ್ ಮತ್ತು ಭಾರತ ಅವರ ಕರ್ಮಭೂಮಿಯಾಗಿದೆ,ಅವರು ಎಲ್ಲ ಕಡೆಗಳಲ್ಲಿಯೂ ಕೆಲಸ ಮಾಡಲಿ ಎಂದು ಮೇನಕಾ ಉತ್ತರಿಸಿದರು.

ಸರಕಾರವನ್ನು ಟೀಕಿಸಿ ವರುಣ ಬರಹಗಳು ಅವರಿಗೆ ಪಿಲಿಭಿಟ್ ಟಿಕೆಟ್ ತಪ್ಪಿಸಿದ್ದವೇ ಎಂಬ ಪ್ರಶ್ನೆಗೆ,ತನಗೆ ಬೇರೆ ಕಾರಣ ಹೊಳೆಯುತ್ತಿಲ್ಲ ಎಂದು ಮೇನಕಾ ಪ್ರತಿಕ್ರಿಯಿಸಿದರು.

1996ರಿಂದಲೂ ಮೇನಕಾ ಅಥವಾ ವರುಣ್ ಗಾಂಧಿ ಗೆದ್ದಿದ್ದ ಪಿಲಿಭೀತ್ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ವರುಣ ಬದಲಿಗೆ ಕೇಂದ್ರ ಸಚಿವ ಜಿತಿನ್ ಪ್ರಸಾದರನ್ನು ಕಣಕ್ಕಿಳಿಸಿದ್ದು,ಅಲ್ಲಿ ಎ.19ರಂದು ಮತದಾನ ನಡೆದಿದೆ. ಸುಲ್ತಾನ್‌ಪುರದಲ್ಲಿ ಮೇ 25ರಂದು ಮತದಾನ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News