×
Ad

ಗಂಭೀರವಾಗಿ ಯೋಚಿಸುತ್ತೇನೆ : ಭಾರತಕ್ಕೆ ವಾಪಾಸ್ಸಾಗುವ ಕುರಿತು ಪಾಡ್‌ಕಾಸ್ಟರ್‌ ಪ್ರಶ್ನೆಗೆ ವಿಜಯ್ ಮಲ್ಯ ಪ್ರತಿಕ್ರಿಯೆ

Update: 2025-06-06 11:07 IST
Photo | PTI

ಹೊಸದಿಲ್ಲಿ : ಭಾರತದ ವಿವಿಧ ಬ್ಯಾಂಕ್‌ಗಳಿಗೆ ಬಹುಕೋಟಿ ವಂಚನೆ ಮಾಡಿರುವ ಆರೋಪಗಳನ್ನು ಎದುರಿಸುತ್ತಿರುವ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಮಾಜಿ ಮುಖ್ಯಸ್ಥ ಉದ್ಯಮಿ ವಿಜಯ್ ಮಲ್ಯ, ಪಾಡ್‌ಕಾಸ್ಟರ್‌ ರಾಜ್ ಶಮಾನಿ ಅವರೊಂದಿಗೆ ನಡೆದ ಸಂಭಾಷಣೆಯಲ್ಲಿ ಭಾರತಕ್ಕೆ ವಾಪಾಸ್ಸಾಗುವ ಕುರಿತು ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಭಾರತಕ್ಕೆ ಹಿಂತಿರುಗದ ಕಾರಣ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸುತ್ತಿದೆಯೇ ಎಂದು ಪಾಡ್‌ಕಾಸ್ಟರ್‌ ರಾಜ್ ಶಮಾನಿ ಕೇಳಿದಾಗ, ಭಾರತದಲ್ಲಿ ನ್ಯಾಯಯುತ ವಿಚಾರಣೆ ಮತ್ತು ಗೌರವಾನ್ವಿತ ಅಸ್ತಿತ್ವದ ಭರವಸೆ ನನಗೆ ಇದ್ದರೆ, ನೀವು ಹೇಳಿದ್ದು ಸರಿ ಇರಬಹುದು, ಆದರೆ ನಾನು ಆ ರೀತಿ ಹೇಳುವುದಿಲ್ಲ ಎಂದು ವಿಜಯ್ ಮಲ್ಯ ಪ್ರತಿಕ್ರಿಯಿಸಿದರು.

ನ್ಯಾಯಯುತ ವಿಚಾರಣೆಯ ಭರವಸೆ ಸಿಕ್ಕರೆ ಭಾರತಕ್ಕೆ ಮರಳಲು ಸಿದ್ಧರಿದ್ದೀರಾ ಎಂದು ಕೇಳಿದಾಗ, ʼನನಗೆ ಭರವಸೆ ಸಿಕ್ಕರೆ, ನಾನು ಅದರ ಬಗ್ಗೆ ಗಂಭೀರವಾಗಿ ಯೋಚಿಸುತ್ತೇನೆʼ ಎಂದು ಹೇಳಿದ್ದಾರೆ.

ಗಡೀಪಾರು ಪ್ರಕರಣದಲ್ಲಿ ಯುಕೆ ಹೈಕೋರ್ಟ್ ತೀರ್ಪನ್ನು ಅವರು ಉಲ್ಲೇಖಿಸಿದರು, ಕೆಲವರನ್ನು ಇಂಗ್ಲೆಂಡ್‌ನಿಂದ ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಕೇಳಿಕೊಂಡಿದೆ. ಭಾರತೀಯ ಬಂಧನದ ಷರತ್ತುಗಳು ECHR ಆರ್ಟಿಕಲ್ 3 ಅನ್ನು ಉಲ್ಲಂಘಿಸುತ್ತದೆ ಎಂದು ಕಂಡುಬಂದಿದೆ ಎಂದು ಹೇಳಿದರು.

ಭಾರತದಿಂದ ತೆರಳಿದ್ದಕ್ಕೆ ʼಪರಾರಿʼ ಎಂದು ಕರೆದಿರುವುದು ನ್ಯಾಯಯುತವಾದರೂ,  ಕಳ್ಳ ಎಂದು ಏಕೆ ಕರೆಯುತ್ತಾರೆ ಮತ್ತು ಕಳ್ಳತನ ಮಾಡಿದ್ದೇನು ಎಂದು ಮಲ್ಯ ಪ್ರಶ್ನಿಸಿದರು.

2016ರ ಮಾರ್ಚ್ ನಂತರ ಭಾರತಕ್ಕೆ ವಾಪಾಸ್ಸಾಗಿಲ್ಲ ಎಂದು ನನ್ನನ್ನು ಪರಾರಿಯಾಗಿದ್ದಾನೆ ಎಂದು ಕರೆಯಿರಿ. ನಾನು ಓಡಿಹೋಗಲಿಲ್ಲ, ಪೂರ್ವನಿಗದಿತ ಭೇಟಿಗಾಗಿ ಭಾರತದಿಂದ ಬಂದಿದ್ದೆ. ಮಾನ್ಯವೆಂದು ಪರಿಗಣಿಸುವ ಕಾರಣಗಳಿಗಾಗಿ ನಾನು ಹಿಂತಿರುಗಲಿಲ್ಲ, ಆದ್ದರಿಂದ ನೀವು ನನ್ನನ್ನು ಪರಾರಿಯಾಗಿದ್ದಾನೆ ಎಂದು ಕರೆಯಲು ಬಯಸಿದರೆ, ಅದರಂತೆ ಮುಂದುವರಿಯಿರಿ, ಆದರೆ ಕಳ್ಳ ಎಂದು ಏಕೆ ಕರೆಯುತ್ತಾರೆ ಎಂದು ಪ್ರಶ್ನಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News