×
Ad

ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಕ್ಷಮೆ ಯಾಚಿಸಿದ ಕುನ್ವರ್ ವಿಜಯ್ ಶಾ

Update: 2025-05-13 21:18 IST

ಹೊಸದಿಲ್ಲಿ: ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವುದಕ್ಕೆ ಮಧ್ಯಪ್ರದೇಶದ ಸಂಪುಟ ಸಚಿವ ಕುನ್ವರ್ ವಿಜಯ್ ಶಾ ಅವರು ಮಂಗಳವಾರ ಕ್ಷಮೆ ಯಾಚಿಸಿದ್ದಾರೆ.

ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿರುವ ಶಾ ಅವರು, ‘‘ನಾನು ದೇವರಲ್ಲ; ನಾನು ಕೂಡ ಮನುಷ್ಯ. ನಾನು 10 ಬಾರಿ ಕ್ಷಮೆ ಯಾಚಿಸುತ್ತೇನೆ’’ ಎಂದಿದ್ದಾರೆ.

ಶಾ ಅವರ ಭಾಷಣದ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಈ ವಿವಾದ ಉಂಟಾಗಿತ್ತು.

ತನ್ನ ಸ್ಪಷ್ಟನೆಯಲ್ಲಿ ಶಾ ಅವರು, ತನ್ನ ಹೇಳಿಕೆಯನ್ನು ಸಂದರ್ಭವನ್ನು ಬಿಟ್ಟು ಉಲ್ಲೇಖಿಸಲಾಗಿದೆ. ತಾನು ಕರ್ನಲ್ ಖುರೇಷಿ ಅವರ ಶೌರ್ಯವನ್ನು ಪ್ರಶಂಸಿಸಲು ಉದ್ದೇಶಿಸಿದ್ದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News