×
Ad

ಕರ್ನಲ್ ಸೋಫಿಯಾ ಖುರೇಶಿ ಕುರಿತ ಹೇಳಿಕೆ ಪ್ರಕರಣ: ಸಚಿವ ವಿಜಯ್ ಶಾರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ

Update: 2025-07-23 22:01 IST

ವಿಜಯ್ ಶಾ, ಕರ್ನಲ್ ಸೋಫಿಯಾ ಖುರೇಶಿ |  Credit: PTI, X/@KrVijayShah

ಹೊಸದಿಲ್ಲಿ: ಭಾರತೀಯ ಸೇನೆಯ ಅಧಿಕಾರಿ ಕರ್ನಲ್ ಸೋಫಿಯಾ ಖುರೇಶಿ ವಿರುದ್ಧ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶ ಸಚಿವ ವಿಜಯ್ ಶಾರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಈ ಅರ್ಜಿಯನ್ನು ಕಾಂಗ್ರೆಸ್ ನಾಯಕ ಜಯ ಠಾಕೂರ್ ಸಲ್ಲಿಸಿದ್ದು, ವಿಜಯ್ ಶಾರ ಹೇಳಿಕೆಯು ಪ್ರತ್ಯೇಕತಾವಾದ ಭಾವನೆಯನ್ನು ಪ್ರಚೋದಿಸುವಂತಿತ್ತು ಹಾಗೂ ದೇಶದ ಐಕ್ಯತೆಗೆ ಧಕ್ಕೆ ತರುವಂತಿತ್ತು ಎಂದು ಆರೋಪಿಸಿದ್ದಾರೆ.

"ಪಹಲ್ಗಾಮ್ ದಾಳಿ ನಡೆಸಿದ ಭಯೋತ್ಪಾದಕರ ಸಹೋದರಿ ಎಂದು ಕರ್ನಲ್ ಸೋಫಿಯಾ ಕುರೇಶಿಯನ್ನು ಕರೆಯುವ ಮೂಲಕ, ಸಚಿವ ವಿಜಯ್ ಶಾರ ಹೇಳಿಕೆಯು ಪ್ರತ್ಯೇಕತಾವಾದವನ್ನು ಪ್ರಚೋದಿಸುವಂತಿತ್ತು" ಎಂದು ಈ ಅರ್ಜಿಯಲ್ಲಿ ಆರೋಪಿಸಲಾಗಿದೆ.

"ಈ ಹೇಳಿಕೆಯ ಮೂಲಕ, ಮುಸ್ಲಿಮರ ವಿರುದ್ಧ ಪ್ರತ್ಯೇಕತಾವಾದದ ಭಾವನೆಗಳನ್ನು ಪ್ರಚೋದಿಸುವ ಮೂಲಕ, ಭಾರತದ ಸಾರ್ವಭೌಮತೆ ಅಥವಾ ಐಕ್ಯತೆ ಹಾಗೂ ಸಮಗ್ರತೆಗೆ ಧಕ್ಕೆಯನ್ನುಂಟು ಮಾಡಲಾಗಿದೆ. ಆ ಭಾಷಣವು ಭಾರತೀಯ ಸಂವಿಧಾನದ ಪರಿಚ್ಛೇದ 3ರ ಅಡಿ ಬೋಧಿಸಲಾಗಿರುವ ಪ್ರಮಾಣ ವಚನದ ನೇರ ಉಲ್ಲಂಘನೆಯಾಗಿದೆ" ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಇದಕ್ಕೂ ಮುನ್ನ, ಮಧ್ಯಪ್ರದೇಶ ಹೈಕೋರ್ಟ್ ನಲ್ಲಿ ನಡೆಯುತ್ತಿರುವ ವಿಜಯ್ ಶಾ ಪ್ರಕರಣದ ವಿಚಾರಣೆಯನ್ನು ಸ್ಥಗಿತಗೊಳಿಸಬೇಕು ಎಂದು ಮೇ 28ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಪ್ರಕರಣದ ವಿಚಾರಣೆಯನ್ನು ತಾನು ಕೈಗೆತ್ತಿಕೊಳ್ಳುವುದಾಗಿ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News