×
Ad

ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಗೆ ಹೊರಗೆಳೆಯುತ್ತೇವೆ, ಕಣ್ಣು ಕೀಳುತ್ತೇವೆ: ಕೇಂದ್ರ ಸಚಿವ ಶೇಖಾವತ್‌ ಎಚ್ಚರಿಕೆ

Update: 2023-09-13 16:53 IST

ಗಜೇಂದ್ರ ಸಿಂಗ್‌ ಶೇಖಾವತ್‌ (PTI)

ಜೈಪುರ: “ಸನಾತನ ಧರ್ಮದ ವಿರುದ್ಧ ಮಾತನಾಡುವವರು ಯಾರೇ ಆಗಿರಲಿ, ಅವರ ನಾಲಗೆಯನ್ನು ಹೊರಗೆಳೆದು ಕಣ್ಣುಗಳನ್ನು ಕೀಳಲಾಗುವುದು,” ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ರಾಜಸ್ಥಾನದ ಬರ್ಮೇರ್‌ ಎಂಬಲ್ಲಿ ನಡೆದ ರ್ಯಾಲಿಯೊಂದರಲ್ಲಿ ಗುಡುಗಿದ್ದಾರೆ.

ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಅವರ ಸನಾತನ ಧರ್ಮ ಹೇಳಿಕೆ ವಿವಾದವಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರ ಈ ಎಚ್ಚರಿಕೆ ಬಂದಿದೆ.

ಸನಾತನ ಧರ್ಮದ ವಿರುದ್ಧ ಮಾತನಾಡುವವರು ದೇಶದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಜೋಧಪುರ ಕ್ಷೇತ್ರದ ಸಂಸದರಾಗಿರುವ ಶೇಖಾವತ್‌ ಹೇಳಿದರು.

“ಅಲ್ಲಾವುದ್ದೀನ್‌ ಖಿಲ್ಜಿ ಮತ್ತು ಔರಂಗ್‌ಜೇಬ್‌ನಂತರ ದೊರೆಗಳು ಪ್ರಯತ್ನಿಸಿದರು, ಆದರೆ ನಮ್ಮ ನಿಮ್ಮೆಲ್ಲರ ಪೂರ್ವಜರು ನಮ್ಮ ಸಂಸ್ಕೃತಿಯನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದ್ದರು,” ಎಂದು ಅವರು ಹೇಳಿದರು.

“ಮಹಾರಾಜ ಸೂರಜ್‌ಮಲ್‌, ವೀರ್‌ ದುರ್ಗಾದಾಸ್‌ ಅಥವಾ ಮಹಾರಾಣ ಪ್ರತಾಪ್‌ನಂತಹ ನಮ್ಮ ಪೂರ್ವಜನರ ಹೆಸರಿನಲ್ಲಿ ಪ್ರತಿಜ್ಞೆ ಮಾಡುತ್ತೇವೆ, ಸನಾತನದ ವಿರುದ್ಧ ದಾಳಿ ನಡೆಸುವವರನ್ನು ಸಹಿಸುವುದಿಲ್ಲ. ಅವರನ್ನು ಬಿಸಾಕುತ್ತೇವೆ,” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News