×
Ad

‌ಲೋಕಸಭಾ ಚುನಾವಣೆಗೆ ಸ್ಪರ್ಧೆ ಕುರಿತ ವದಂತಿಗೆ ನಟ ಸಂಜಯ್‌ ದತ್‌ ಪ್ರತಿಕ್ರಿಯಿಸಿದ್ದು ಹೀಗೆ...

Update: 2024-04-08 17:17 IST

ಸಂಜಯ್‌ ದತ್ (PTI)

ಹೊಸದಿಲ್ಲಿ: ನಟ ಸಂಜಯ್‌ ದತ್ ಶೀಘ್ರ ರಾಜಕೀಯ ಸೇರಲಿದ್ದಾರೆಂಬ ವದಂತಿಗಳ ನಡುವೆ ಸ್ಪಷ್ಟೀಕರಣ ನೀಡಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ನಟ, ತಾವು ಯಾವುದೇ ಪಕ್ಷ ಸೇರುವುದಿಲ್ಲ ಅಥವಾ ಚುನಾವಣೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.

“ನಾನು ರಾಜಕೀಯಕ್ಕೆ ಬರುತ್ತೇನೆಂಬ ಎಲ್ಲಾ ವದಂತಿಗಳನ್ನು ಕೊನೆಗೊಳಿಸಲು ಬಯಸುತ್ತೇನೆ. ನಾನು ಯಾವುದೇ ಪಕ್ಷ ಸೇರುವುದಿಲ್ಲ, ಅಥವಾ ಚುನಾವಣೆ ಸ್ಪರ್ಧಿಸುವುದಿಲ್ಲ. ಆದರೆ ರಾಜಕೀಯ ಪ್ರವೇಶಿಸಲು ನಾನು ನಿರ್ಧರಿಸಿದ್ದೇ ಆದಲ್ಲಿ, ಅದನ್ನು ನಾನೇ ಮೊದಲಾಗಿ ತಿಳಿಸುತ್ತೇನೆ. ಸದ್ಯಕ್ಕೆ ನನ್ನ ಸುತ್ತ ಹರಡುತ್ತಿರುವ ಸುದ್ದಿಯನ್ನು ನಂಬುವುದನ್ನು ಬಿಟ್ಟುಬಿಡಿ,” ಎಂದು ಬರೆದಿದ್ದಾರೆ.

ರಾಜಕೀಯ ಸೇರುವ ಕುರಿತ ವದಂತಿಗಳನ್ನು ಸಂಜಯ್‌ ದತ್ ಅಲ್ಲಗಳೆದಿರುವುದು ಇದು ಮೊದಲ ಬಾರಿಯಲ್ಲ. 2019ರಲ್ಲಿ ತಾವು ರಾಷ್ಟ್ರೀಯ ಸಮಾಜವಾದಿ ಪಕ್ಷ ಸೇರುವ ವದಂತಿಯನ್ನು ಅವರು ಅಲ್ಲಗಳೆದಿದ್ದರು. ಆಗಿನ ಮಹಾರಾಷ್ಟ್ರ ಸಚಿವ ಮಹದೇವ್‌ ಜನ್ಕರ್‌ ಅವರು ಈ ಬಗ್ಗೆ ಹೇಳಿಕೊಂಡಿದ್ದರು.

2009ರಲ್ಲಿ ಆತ್ಮೀಯ ಸ್ನೇಹಿತರೊಬ್ಬರ ಒತ್ತಾಯದ ಮೇರೆಗೆ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಲು ಒಪ್ಪಿದ್ದರೂ ನಂತರ ಹಿಂದೆ ಸರಿದಿದ್ದರು. ನಂತರ ಅವರನ್ನು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿಸಲಾಗಿತ್ತು. ಆ ಹುದ್ದೆಯನ್ನು ಅವರು ಡಿಸೆಂಬರ್‌ 2010ರಲ್ಲಿ ತೊರೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News