×
Ad

ಭಾರತದ ಗಡಿಯುದ್ದಕ್ಕೂ ಮಾದಕವಸ್ತು ಕಳ್ಳಸಾಗಣೆಗೆ ಡ್ರೋನ್ ಬಳಕೆ: ಪಾಕ್ ಅಧಿಕಾರಿ

Update: 2023-07-28 22:42 IST

ಸಾಂದರ್ಭಿಕ ಚಿತ್ರ \ Photo: PTI

ಇಸ್ಲಮಾಬಾದ್: ಪಾಕಿಸ್ತಾನದ ಕಳ್ಳಸಾಗಣೆದಾರರು ಭಾರತದ ಗಡಿಯುದ್ದಕ್ಕೂ ಮಾದಕವಸ್ತು ಕಳ್ಳಸಾಗಣೆಗೆ ಡ್ರೋನ್‍ಗಳನ್ನು ಬಳಸುತ್ತಿದ್ದಾರೆ ಎಂದು ಪಾಕ್ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ.

ಪಾಕ್-ಭಾರತ ಗಡಿಪ್ರದೇಶದ ಬಳಿಯಿರುವ ಕಸೂರ್ ಪ್ರಾಂತದ ಪ್ರವಾಹ ಸಂತ್ರಸ್ತ ಪ್ರದೇಶದಲ್ಲಿ ಕಳ್ಳಸಾಗಣೆದಾರರು ಭಾರತದ ಪ್ರದೇಶೊಳಗೆ ಮಾದಕವಸ್ತು ಕಳ್ಳಸಾಗಣೆಗೆ ಡ್ರೋನ್‍ಗಳನ್ನು ಬಳಸುತ್ತಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿಯ ವಿಶೇಷ ಸಲಹೆಗಾರ ಮಲಿಕ್ ಮುಹಮ್ಮದ್ ಅಹ್ಮದ್‍ಖಾನ್ ಹೇಳಿರುವುದಾಗಿ `ಜಿಯೊ ನ್ಯೂಸ್' ವರದಿ ಮಾಡಿದೆ.

ಕಸೂರ್ ಪ್ರಾಂತದಲ್ಲಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಹ್ಮದ್‍ಖಾನ್ ` ಹೌದು ಇದು ದಟ್ಟವಾದ ಅರಣ್ಯಗಳಿರುವ ಪ್ರದೇಶ. ಡ್ರೋನ್‍ಗಳಿಗೆ ಕಟ್ಟಿ ಈ ಪ್ರದೇಶದಿಂದ ಗಡಿಯಾಚೆಗೆ ಮದಕವಸ್ತು ಕಳ್ಳಸಾಗಣೆ ನಡೆಯುತ್ತಿರುವುದನ್ನು ಗಮನಿಸಲಾಗಿದೆ. ಇದು ಅತ್ಯಂತ ದುರದೃಷ್ಟಕರ. ಇತ್ತೀಚೆಗೆ ತಲಾ 10 ಕಿ.ಗ್ರಾಂನಷ್ಟು ಹೆರಾಯ್ನ್ ಅನ್ನು ಎರಡು ಡ್ರೋನ್‍ಗಳಿಗೆ ಕಟ್ಟಿ ಗಡಿಯಾಚೆಗೆ ಎಸೆಯಲಾಗಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News