ಖರ್ಗೆ ರ‍್ಯಾಲಿ ನಡೆಸಿದ 'ಸ್ಥಳ ಶುದ್ಧೀಕರಣ' | ಇದು ಸಂವಿಧಾನಕ್ಕೆ ಮಾಡಿದ ಘನ ಘೋರ ಅವಮಾನ

Update: 2026-08-14 16:08 IST

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (File Photo: PTI)

ಮಾನ್ಯರೇ,

ಮಲ್ಲಿಕಾರ್ಜುನ ಖರ್ಗೆ ರ್ಯಾಲಿ ನಡೆಸಿದ ಸ್ಥಳವನ್ನು ಕೇಸರಿ ಸಂಘಟನೆ ಶುದ್ಧೀಕರಣಕ್ಕಾಗಿ ಹವನ ಕಾರ್ಯ ನಡೆಸಿರುವ ವಿಚಾರ ತಿಳಿದು ಇಡೀ ದೇಶವೇ ಆತ್ಮ ಗೌರವದಿಂದ ತಲೆತಗ್ಗಿಸುವಂತೆ ಆಗಿದೆ. ಈ ದೇಶದ 3,000 ವರ್ಷಗಳ ಚಾತುರ್ವರ್ಣ ಶ್ರೇಷ್ಠತೆಯ ಮಲವನ್ನು ತಲೆಯಲ್ಲಿ ತುಂಬಿಕೊಂಡ ಜನ ಇಂದಿಗೂ ಅದರಿಂದ ಹೊರಬರದಿರುವುದು ದೇಶದ ದುರಂತವೇ ಸರಿ.

ಸ್ವಾಭಿಮಾನಶೀಲ ರಾಷ್ಟ್ರೀಯ ನಾಯಕನೊಬ್ಬನಿಗೆ ಮಾಡಿರುವ ಅಗೌರವ, ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅಗೌರವವಲ್ಲ, ಇಡೀ ಸಂವಿಧಾನಕ್ಕೆ ಮಾಡಿದ ಘನ ಘೋರ ಅವಮಾನ, ಅಪರಾಧ. ನಮ್ಮ ದೇಶ ಯಾವ ಶತಮಾನಗಳ ಹಿಂದೆ ಇದೆ ಎಂಬುದು ಇದರಿಂದ ವ್ಯಕ್ತವಾಗುತ್ತದೆ.

ಜಗತ್ತಿನ ಎದುರು ವಿಶ್ವಗುರು ಆಗುವ ಯೋಗ್ಯತೆ ಈ ದೇಶಕ್ಕಿದೆಯೇ ಎಂದು ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟವಿದು. ಮೊದಲು ನಮ್ಮ ತಲೆಯಲ್ಲಿ ತುಂಬಿಕೊಂಡಿರುವ ಆ ವರ್ಣ ಶ್ರೇಷ್ಠತೆಯ ವ್ಯಸನದ ಕಸವನ್ನು ಗುಡಿಸಿ ಎಸೆಯದ ಹೊರತು ದೇಶಕ್ಕೆ ಮುಕ್ತಿ ಇಲ್ಲ ನಮ್ಮ ಸ್ವಾತಂತ್ರಕ್ಕೆ ಅರ್ಥವಿಲ್ಲ.

ಎಸ್.ಜಿ.ಸಿದ್ದರಾಮಯ್ಯ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News