ಸಿಂಧನೂರು ದಸರಾ ಮಹೋತ್ಸವದಲ್ಲಿ ಅಂಬೇಡ್ಕರ್ ರಿಗೆ ಅವಮಾನ: ಸುರೇಶ್ ಕಟ್ಟಿಮನಿ ಆರೋಪ
ಸಿಂಧನೂರು: ಪ್ರತಿ ವರ್ಷದಂತೆ ಈ ವರ್ಷವೂ ಸಿಂಧನೂರಿನಲ್ಲಿ ದಸರಾ ಉತ್ಸವ ಅದ್ಧೂರಿಯಾಗಿ ನೆರದಿದ್ದು ತಾಯಿ ಚಾಮುಂಡೇಶ್ವರಿ ಭಾವ ಚಿತ್ರ ಜೊತೆಗೆ ಹಲವು ಗಣ್ಯರು ಸ್ತಬ್ಧ ಚಿತ್ರ ಕೂಡ ಮೆರವಣಿಗೆಯಲ್ಲಿ ಕಂಡುಬಂದವು. ಆದರೆ ಸಂವಿಧಾನ ಶಿಲ್ಪಿ ಡಾ:ಬಾಬಾಸಾಹೇಬ್ ಅಂಬೇಡ್ಕರರ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆ ಆ ಮೆರವಣಿಗೆಯಲ್ಲಿ ಕಾಣಿಸಲೇ ಇಲ್ಲ ಆ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ನಮ್ಮ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ್ ಕಟ್ಟಿಮನಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕ ಆಡಳಿತದ ನೇತೃತ್ವದಲ್ಲಿ ಆಗಿರುವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರ ಸ್ತಬ್ಧಚಿತ್ರ ಹಾಗೂ ಸಂವಿಧಾನ ಪೀಠಿಕೆ ಹಾಕುವುದನ್ನು ಬಿಟ್ಟಿದ್ದಾರೆ ಅಂದರೆ ಇದು ಉದ್ದೇಶ ಪೂರ್ವಕ ಅನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ತಹಶೀಲ್ದಾರ್ ಇದಕ್ಕೆ ಹೊಣೆಯಾಗುತ್ತಾರೆ ಎಂದು ದೂರಿದರು.
ತಹಶೀಲ್ದಾರ್ ಅವರು ಅಧಿಕಾರಿಯಾಗಿ ಕೆಲಸ ಮಾಡಲು ಬಂದಿದ್ದಾರೂ ಅಥವಾ ರಾಜಕಾರಣ ಮಾಡಲು ಬಂದಿದ್ದಾರೆಯೇ ಎಂದು ಪ್ರಶ್ನಿಸಿದ ಸುರೇಶ್ ಕಟ್ಟಿಮನಿ, ಇಂಥ ಅವಿವೇಕಿ ತಹಶೀಲ್ದಾರರು ನಮಗೆ ಬೇಡ. ಆದಷ್ಟು ಬೇಗ ಜಿಲ್ಲಾಧಿಕಾ ಈ ವಿಷಯ ಗಂಭೀರವಾಗಿ ಪರಿಗಣಿಸಿ ಈ ತಹಶೀಲ್ದಾರರನ್ನು ಅಮಾನತು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.