ಫೆ.1ರಂದು ಸಿದ್ದರಾಮಾನಂದ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮ: ಕೆ.ಭೀಮಣ್ಣ
ಸಿಂಧನೂರು: ತಿಂಥಣಿ ಬ್ರಿಡ್ಜ್ ನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿಗಳ ಪುಣ್ಯರಾಧನೆ ಕಾರ್ಯಕ್ರಮ ಎರಡು ದಿನಗಳ ಕಾಲ ಆಯೋಜನೆ ಮಾಡಿದ್ದು, ಫೆ.1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಭಾಗಿಯಾಗಲಿದ್ದಾರೆ ಎಂದು ಕುರುಬರ ಸಂಘದ ಅದ್ಯಕ್ಷ ಕೆ.ಭೀಮಣ್ಣ ತಿಳಿಸಿದರು.
ಗುರುವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು, ಜ.31ರಂದು ಸುಮಾರು 60ಕ್ಕೂ ಹೆಚ್ಚು ಮಠಾಧೀಶರು ಹಾಗೂ ಸಮಾಜದ ಗುರುಗಳಿಂದ ಶ್ರೀಗಳ ಗದ್ದುಗೆ ಬಳಿ ಧಾರ್ಮಿಕ ವಿಧಿ-ವಿಧಾನ ಕಾರ್ಯಗಳಿಂದ ಪುಣ್ಯಾರಾಧನೆ ನಡೆಯಲಿದೆ. ಫೆ.1ರಂದು ನುಡಿನಮನ ನಡೆಯಲಿದ್ದು, 50ರಿಂದ 60 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಪಿಡಬ್ಲ್ಯುಡಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಸಚಿವರು, ಶಾಸಕರು, ಸಂಸದರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಕಾಗಿನೆಲೆ ಕನಕ ಗುರುಪೀಠದ ತಾಲ್ಲೂಕು ಅಧ್ಯಕ್ಷ ಅಮರೇಶಪ್ಪ ಮೈಲಾರ ಮಾತನಾಡಿ, ಪುಣ್ಯಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲಾ ಸಿದ್ದತೆಯನ್ನು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ನೇತೃತ್ವದಲ್ಲಿ ನಡೆಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಕನಕ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಅರಳಿಮರ, ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ ಹಚ್ಚೊಳ್ಳಿ, ಮುಖಂಡರಾದ ಹುಚ್ಚಪ್ಪ ನೇಗಲಿ, ನಾಗರಾಜ ಬಾದರ್ಲಿ, ಟಿ.ಶಿವು, ಆಂಜನೇಯ, ಮಲ್ಲಪ್ಪ ಮೈಲಾರ, ಬಸವರಾಜ ಗೊರೇಬಾಳ ಉಪಸ್ಥಿತರಿದ್ದರು.