×
Ad

ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ವ್ಯಕ್ತಿ ಈಗ ಸನ್ಯಾಸಿ ; ಅಚ್ಚರಿಗೆ ಕಾರಣವಾದ ಐಎಎಸ್ ಅಧಿಕಾರಿಯ ನಡೆ

Update: 2025-01-19 20:37 IST

ಐ.ಆರ್.ಪೆರುಮಾಳ್

ರಾಯಚೂರು : 1993-94ರ ಅವಧಿಯಲ್ಲಿ ರಾಯಚೂರು ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ಐ.ಆರ್.ಪೆರುಮಾಳ್ ಅವರು ಈಗ ಸನ್ಯಾಸಿಯಾಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಜೀವನದ ಅಂತಿಮ ಸತ್ಯಕ್ಕೆ ಮನಸೋತು ಸಂತರಂತೆ ಹಿಮಾಲಯದಲ್ಲಿ ಬದುಕುತ್ತಿದ್ದಾರೆಂಬ ಸಂಗತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಐ.ಆರ್.ಪೆರುಮಾಳ್ ಅವರು ಮೇ.3ರ 1993ರಂದು ಅಧಿಕಾರ ಸ್ವೀಕರಿಸಿ, 1994 ರ ಜುಲೈ 22 ರವರೆಗೂ ಜಿಲ್ಲಾಧಿಕಾರಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಜಿಲ್ಲಾಧಿಕಾರಿಗಳಾಗಿದ್ದ ಐ.ಆರ್.ಪೆರುಮಾಳ್ ಅವರಿಗೆ ಸನ್ಯಾಸಿಯಾಗುವಂತಹ ಸಂಗತಿ ಏನಿತ್ತು ಎಂದು ಸಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಐಎಎಸ್ ಅಧಿಕಾರಿಯಾಗಿ ಸಾಮಾಜಿಕ ಜೀವನದಲ್ಲಿ ಅನೇಕ ಯುವಕರಿಗೆ ಮಾದರಿಯಾಗಿದ್ದ ಪೆರುಮಾಳ್ ಅವರು, ಈಗ ಸನ್ಯಾಸಿಯಾಗಿ ಯುವಕರಿಗೆ ಏನು ಸಂದೇಶ ನೀಡಲು ಬಯಸಿದ್ದಾರೆ ಎಂದು ಕೆಲವರು ಪ್ರಶ್ನೆ ಮಾಡಿದರೆ, ಜೀವನದ ಅಂತಿಮ ಸತ್ಯವನ್ನು ಅರಿತು ಸನ್ಯಾಸಿಯಾಗಿದ್ದಾರೆ ಎಂದು ಪರ, ವಿರೋಧದ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News