×
Ad

ರಾಯಚೂರು: ಮೂಲಸೌಕರ್ಯ ಕಲ್ಪಿಸಲು‌ ಒತ್ತಾಯಿಸಿ ಸಮಾಜ ಸೇವಾ ಸಂಘದಿಂದ‌ ಮನವಿ

Update: 2025-02-19 18:17 IST

ರಾಯಚೂರು: ನಗರದ ವಾರ್ಡ್ ನಂಬರ್ 28ರ ಎಲ್ ಬಿಎಸ್ ನಗರ ಹಾಗೂ 29ರ‌ ಆಶ್ರಯ ಕಾಲೊನಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಸಮಾಜಸೇವಾ ಸಂಘದಿಂದ ಮಹಾನಗರ ಪಾಲಿಕೆ ಅಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಎಲ್‌ಬಿಎಸ್ ನಗರ ಹಾಗೂ ಆಶ್ರಯ ಕಾಲೊನಿಗೆ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿಲ್ಲ, ಸ್ವಚ್ಛತೆ ಸರಿಯಾಗಿ ಮಾಡುತ್ತಿಲ್ಲ, ಬೀದಿ ದೀಪಗಳು ಉರಿಯುತ್ತಿಲ್ಲ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಇಲ್ಲಿನ ನಿವಾಸಿಗಳು ಅನೇಕ ಸಮಸ್ಯೆ ಎದುರಿಸುತ್ತಿದ್ದು‌ ಮಹಾನಗರ ಅಧಿಕಾರಿಗಳು ಹಾಗೂ ಸದಸ್ಯರು ಇತ್ತ ಗಮನಹರಿಸುತ್ತಿಲ್ಲ ಎಂದು ದೂರಿದರು.

ಅಲ್ಲದೇ ನಗರದ ಪ್ರಮುಖ ರಸ್ತೆಗಳಲ್ಲಿ ಧೂಳಿನ‌ ಸಮಸ್ಯೆ ಹೆಚ್ಚಾಗಿದೆ ಇದರಿಂದ ವಾಹನ ಸವಾರರು ಅಪಘಾತಕ್ಕೀಡಾಗುವಂತಾಗಿದೆ. ಪ್ರಮುಖ ರಸ್ತೆಗಳಲ್ಲಿ ಪಾದಾಚಾರಿ ಮಾರ್ಗವನ್ನು ಒತ್ತುವರಿಯಾಗಿದ್ದು, ರಸ್ತೆಯ ಮೇಲೆ ವಾಹನಗಳು ನಿಲುಗಡೆ ಮಾಡಲಾಗುತ್ತಿದೆ ಇದರಿಂದ ಪಾದಾಚಾರಿಗಳಿಗೆ ನಡೆದಾಡಲು‌‌ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.

ನಗರಕ್ಕೆ ಮೂಲಸೌಕರ್ಯ ಕಲ್ಪಿಸಿ ಒತ್ತುಬರಿ ತೆರವುಗೊಳಿಸಿ ಸುಂದರ ನಗರ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ. ಈರೇಶ, ಹೆಚ್.ಬಾಷಾ, ಕಿಶನ್ ಕುಮಾರ, ಧರ್ಮೇಶ್, ಸುಧಾಕ‌ರ್ ಸ್ವಾಮಿ, ಮಹ್ಮದ್ ಫಾರುಕ್, ಮಹ್ಮದ್ ಇಬ್ರಾಹಿಂ, ಭೀರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News