ಬಿಜೆಪಿ ಶಾಸಕರ ಒಡೆತನದ ಗುತ್ತಿಗೆ ಕಂಪೆನಿಯಿಂದ ಹಣ ಬಾಕಿ: ಆರೋಪ
ಅ.15ರಂದು ಶಾಸಕರ ಮನೆ ಎದುರು ಉಪವಾಸ ಸತ್ಯಾಗ್ರಹ
Update: 2025-10-05 23:34 IST
ರಾಯಚೂರು : ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿಯ ಉಪಗುತ್ತಿಗೆ ಕೆಲಸ ಪೂರ್ಣಗೊಂಡಿದ್ದರೂ ಬಿಲ್ ಪಾವತಿ ಮಾಡುವಲ್ಲಿ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಒಡೆತನದ ಎನ್.ಡಿ.ವಡ್ಡರ್ ಕಂಪೆನಿ ವಿನಾಕಾರಣ ವಿಳಂಬ ಮಾಡುತ್ತಿದೆ ಎಂದು ದೇವದುರ್ಗ ತಾಲೂಕು ಸಣ್ಣ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶರಣೇಗೌಡ ಸುಂಕೇಶ್ವರಹಾಳ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲೇ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿ ಅ.15ರಂದು ಶಾಸಕ ಮಾನಪ್ಪವಜ್ಜಲ್ ಮನೆ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಣ್ಣಸಿವಿಲ್ ಗುತ್ತಿಗೆದಾರರ ಪದಾಧಿಕಾರಿಗಳಾದ ಸಂಘದ ತುಕಾರಾಮ ಜಿನ್ನಾಪುರ, ಆಂಜಿನೇಯ ಬಡಿಗೇರ, ವಿರೇಶ, ಪರಮಾನಂದ ಉಪಸ್ಥಿತರಿದ್ದರು.