×
Ad

ರಾಯಚೂರು: ಭೂಕಬಳಕೆದಾರರ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಸಿಪಿಐಎಲ್ ಲಿಬರೇಶನ್ ಪ್ರತಿಭಟನೆ

Update: 2025-01-21 20:27 IST

ರಾಯಚೂರು: ರಾಯಚೂರು ತಾಲೂಕಿನ ಯರಗೇರಾ ಗ್ರಾಮದ ಸರ್ವೇ ನಂಬರ್ 149 ಸರ್ಕಾರಿ ಭೂಮಿಯಲ್ಲಿ ಅಕ್ರಮ ಮತ್ತು ದೌರ್ಜನ್ಯದಿಂದ ನಿವೇಶನಗಳು ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ -ಲೆನಿನ್ ವಾದಿ) ಲಿಬರೇಶನ್ ರಾಯಚೂರು ತಾಲೂಕು ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಡಿ.ಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ತಾಲೂಕು ಸಮಿತಿಯ ಪದಾಧಿಕಾರಿಗಳು ಭೂಕಬಳಕೆದಾರರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಆಕ್ರೋಶ ವ್ಯಕ್ತಪಡಿಸಿದರು.

ಯರಗೇರಾ ಗ್ರಾಮದ ಸರ್ವೇ ನಂಬರ್ 149 ಹಿಸ್ಸ 2/B, 3 ಎಕ್ಕರೆ 13 ಗುಂಟೆ ಜಮೀನು ಖಾರಿಜಾ ಖಾತ ಜಮೀನ್ ವ್ಯವಸಾಯ ಸೇವೆ ಸಹಕಾರ ಮಾರುಕಟ್ಟೆ ಸಮಿತಿ ಇವರ ಪಹಣಿ ಸರ್ಕಾರಿ ಭೂಮಿ ಆಗಿದ್ದು .ಈ ಭೂಮಿ ರೇಹಾನ ಬೇಗಂ ಗಂಡ ಮಹಮ್ಮದ್ ಹುಸೇನ್ ಅಬಕಾರಿ ಸಾಕೀನ್ ಯರಗೇರಾ ಇವರು ಸುಮಾರು ವರ್ಷಗಳಿಂದ ಅಂದರೆ 1973-74 ರಿಂದ 2015 ವರೆಗೆ ಸಾಗುವಳಿ ಮಾಡುತ್ತಾ ಬಂದಿರುತ್ತಾರೆ.

ಈಗ ರಾಯಚೂರಿನ‌ ನಿವಾಸಿಯೂ ಆಗಿರು ಕೆಎಸ್ಆರ್ ಟಿಸಿ ಡಿಪೋ‌-2 ಸಿಬ್ಬಂದಿ (ಮೆಕ್ಯಾನಿಕ್) ಮುಸ್ತಫಾ ಸುಳ್ಳು ದಾಖಲೆ ಗಳನ್ನು ಸೃಷ್ಟಿಸಿ ಮೇಹರೊನ್ ಬೀ ಗಂಡ ಇಸಾಮುದ್ದಿನ್ ಯರಗೇರಾ ಎಂದು ಹೇಳಿ ಈ ಭೂಮಿಯನ್ನು ರಾಯಚೂರಿನ ಐಡಿಎಸ್ ಎಂಟಿ ನಿವಾಸಿ ರಮೇಶ್ ತಂದೆ ಮಾಣಿಕ್ ರಾವು ಸಾಕೀನ್ ರಾಯಚೂರು ಅವರಿಗೆ 2015 ರಲ್ಲಿ ಮಾರಾಟ ಮಾಡಿರುತ್ತಾರೆ ಎಂದು ದೂರಿದರು.

ಈ ಭೂಮಿಯಯನ್ನು ರಾಂಪೂರಿನ ಹನುಮಂತ ತಂದೆ ಅಯ್ಯಣ್ಣ ಎಂಬುವವರ ಹೆಸರಿನಲ್ಲಿ 2016 ರಲ್ಲಿ ವರ್ಗಾವಣೆ ಮಾಡಲಾಗಿದೆ.

ನಕಲಿ‌ ದಾಖಲೆ ಸೃಷ್ಟಿಸಿ ಕಳೆದ ಮೇ ತಿಂಗಳ 2024 ನಿಂದ ಆಂಧ್ರ ಪ್ರದೇಶದ ರಫಿ ಮತ್ತು ಹೈದೆರ್ ಸರ್ಕಾರಿ ಭೂಮಿಯಲ್ಲಿ ದೌರ್ಜನ್ಯದಿಂದ ನಿವೇಶನಗಳನ್ನು ಮಾಡಿ ಮಾರಾಟಕ್ಕೆ ಮಾಡುತ್ತಿದ್ದಾರೆ ಎಂದಯ ದೂರಿದರು.

ಈ ಪ್ರಕಾರಣಕ್ಕೆ ಸಂಬಂಧಿಸಿದಂತೆ 6/11/2015 ರಲ್ಲಿ ಆಗಿನ ಜಿಲ್ಲಾ ಅಧಿಕಾರಿಗಳಾಗುದ್ದ ಸೆಸಿಕಾಂತ್ ಸಿಂಥಿಲ್ ಮತ್ತು ಅಪರ ಜಿಲ್ಲಾಧಿಕಾರಿಗಳಾಗಿದ್ದ ರುದ್ರೇಶ್ ಎಸ್ ಘಳಿ* ಮತ್ತು ತಹಶೀಲ್ದಾರ್ ಶಾನೂರು ಮನವಿ ಸಲ್ಲಿಸಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ‌ ಎಂದು ಆರೋಪಿಸಿದರು.

ರಾಯಚೂರು ತಾಲ್ಲೂಕಿನ ಹಲವು ಗ್ರಾಮ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಬಹುತೇಕ ಬಡವರಿಗೆ ಇಂದಿಗೂ ನಿವೇಶನ, ವಸತಿ ಇಲ್ಲ, ಮುರುಕು ಶೆಡ್ಡು, ಬಾಡಿಗೆ ಮನೆಗಳಲ್ಲಿ ವಾಸಿಸುವ ಮೂಲಕ ನರಕಯಾತನೆ ಅನುಭವಿಸುತ್ತಿದ್ದಾರೆ. ಇನ್ನು ಕೆಲ ಪಟ್ಟ ಹಿತಾಸಕ್ತಿಗಳು ಸರ್ಕಾರಿ ಜಮೀನು ಭೂಮಿ ನಿವೇಶನಗಳನ್ನು ಅತಿಕ್ರಮಿಸಿಕೊಳ್ಳುವ ಮೂಲಕ ಬಡವರಿಗೆ ದೊರೆಯ ಬೇಕಾದ ಸೌಕರ್ಯಗಳಿಂದ ವಂಚಿಸುತ್ತಿದ್ದಾರೆ ಎಂದು ದೂರಿದರು.

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 94/ಸಿ, 94 ಸಿಸಿ ಅರ್ಜಿ ಸಲ್ಲಿಸಿಲು ನಿರ್ದೇಶನ ನೀಡಬೇಕು ಮನೆಗಳನ್ನು ನಿರ್ಮಿಸಿ, ಸರ್ಕಾರಿ ಭೂಮಿ ಒತ್ತುವರಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಕೂಡಲೇ ಭೂಮಿಯನ್ನು ಬಡವರಿಗೆ ವಿತರಣೆ ಕಾರ್ಯವನ್ನು ಕಾಲಮಿತಿ ಯೊಳಗೆ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು

ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರಾದ ಅಜೀಜ್ ಜಾಗೀರ್ದಾರ್, ರವಿಚಂದ್ರ, ತಾಲೂಕು ಸಮಿತಿಯ ಮುಖಂಡ ಮೊಹಮ್ಮದ್ ಹನೀಫ್ ಅಬಕಾರಿ,‌ಮೊಹಮ್ಮದ್ ಗೌಸ್ ಮುಲ್ಲಾ, ಜಿಲಾನಿ ಪಾಶ ಯರಗೇರಾ, ಜಂಬಣ್ಣ ಯರಗೇರಾ, ಹುಸೇನ್ ,ರಫಿ, ಇರ್ಷಾದ್ ,ಮೆಹಬೂಬ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News