×
Ad

ಹುಸೇನಪುರ | ಸರಕಾರಿ‌ ಶಾಲೆಗೆ 5 ಎಕರೆ ಜಮೀನು ನೀಡಲು ಗ್ರಾಮಸ್ಥರ ಒತ್ತಾಯ

Update: 2025-09-18 16:36 IST

ಸಿರವಾರ : ತಾಲೂಕಿನ ಹುಸೇನಪುರ ಗ್ರಾಮದ ಸರ್ವೆ ನಂ.21 ರಲ್ಲಿ 5 ಎಕರೆ ಜಮೀನನ್ನು ಸರ್ಕಾರಿ ಶಾಲೆಗೆ ನೀಡಬೇಕೆಂದು ಗ್ರಾಮಸ್ಥರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಹುಸೇನಪುರ ಗ್ರಾಮದ ಸರ್ವೆ ನಂ21 ರ 31 ಎಕರೆ 19 ಗುಂಟೆ ಭೂಮಿಯಲ್ಲಿ 5 ಎಕರೆ ಜಮೀನನ್ನು ಸರ್ಕಾರಿ ಶಾಲೆಗೆ ನೀಡಿ ಮಕ್ಕಳ ಭವಿಷ್ಯಕ್ಕೆ ಸಹಕಾರ ಮಾಡಬೇಕೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರವೇ ತಾಲೂಕಧ್ಯಕ್ಷ ರಾಘವೇಂದ್ರ ಖಾಜನಗೌಡ, ರಮೇಶ ನಾಯಕ, ಶಿವುರಾಜ ನಾಯಕ,, ಎಸ್ಡಿಎಂಸಿ ಅಮರೇಶ ದೊರೆ, ಉಪಾಧ್ಯಕ್ಷೆ ಲಕ್ಷ್ಮಣ ಸಿಂಗ್, ದೇವು, ಸೈಯದ್, ಚನ್ನಬಸವ, ಅಮರೇಶ, ಲಿಂಗರಾಜ, ಹೂವಪ್ಪ, ಲಕ್ಷ್ಮಣ ಸಿಂಗ್ ಎಂ, ಮೌನೇಶ ಸೇರಿದಂತೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News