ಸಿಂಧನೂರ ತಾಲೂಕಿನಲ್ಲಿ ಬಹುಕೋಟಿ ರೂ. ಮೊತ್ತದ ಹಲವು ಅಭಿವೃದ್ಧಿ ಕಾಮಗಾರಿಗೆ ಸಚಿವರಿಂದ ಚಾಲನೆ
ರಾಯಚೂರು : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಸೆ.27ರಂದು ಸಿಂಧನೂರಿನಲ್ಲಿ ಆರೋಗ್ಯ ಇಲಾಖೆ, ಕರ್ನಾಟಕ ಗೃಹಮಂಡಳಿ, ಕೆಆರ್‌ಐಡಿಎಲ್ ಸೇರಿದಂತೆ ಹಲವು ಇಲಾಖೆಗಳ ಕಟ್ಟಡಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ತಾಯಿ-ಮಕ್ಕಳ ಆಸ್ಪತ್ರೆ, 1.5 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಪಂಚಾಯತ್ ಕಾರ್ಯಾಲಯಕ್ಕೆ ಲೋಕಾರ್ಪಣೆ ಮಾಡಲಾಯಿತು.
ಅದೇ ರೀತಿ 6 ಕೋಟಿ ರೂ. ಜಿಟಿಟಿಸಿ ಕಟ್ಟಡ, 1.48 ಕೋಟಿ ರೂ. ತರಬೇತಿ ಕೇಂದ್ರ ಮತ್ತು ಸಾಂಸ್ಕೃತಿಕ ಭವನ, 1.46 ಕೋಟಿ ರೂ. ಸರ್ಕಾರಿ ಬಾಲಕರ ಪಿಯು ಕಾಲೇಜು ಕಟ್ಟಡ, 20 ಕೋಟಿ ರೂ. ಸರ್ಕಾರಿ ಪದವಿ ಮಹಾವಿದ್ಯಾಲಯ ಕಟ್ಟಡ ಮತ್ತು 10 ಕೋಟಿ ರೂ. ಅಕ್ಕ ಮಹಾದೇವಿ ಮಹಿಳಾ ಸ್ನಾತಕೋತ್ತರ ವಸತಿ ನಿಲಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.