ಮಸ್ಕಿ | ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ರುಂಡವಿಲ್ಲದ ನವಜಾತ ಶಿಶು ಪತ್ತೆ
Update: 2025-08-23 16:31 IST
ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ತೋರಣದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂದುಗಡೆ ರುಂಡವಿಲ್ಲದ(ತಲೆಯಿಲ್ಲದ ಭಾಗ) ನವಜಾತ ಶಿಶು ಇಂದು ಬೆಳಿಗ್ಗೆ ಕಂಡು ಬಂದಿದೆ.
ಸ್ಥಳೀಯರು ನೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳಿಗೆ, ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪುರಸಭೆ ಅಧಿಕಾರಿಗಳು ಶಿಶುವಿನ ಪೋಷಕರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.