ಮಸ್ಕಿ | 3.5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಾಸಕರಿಂದ ಚಾಲನೆ
ಸರಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಮೂಲ ಸೌಕರ್ಯ : ಶಾಸಕ ಆರ್.ಬಸನಗೌಡ
ಮಸ್ಕಿ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಆಟದ ಮೈದಾನ, ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ಕಂಪೌಂಡ್ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಭರವಸೆ ನೀಡಿದರು.
ಪಟ್ಟಣದ ಮುದಗಲ್ ರಸ್ತೆಯಲ್ಲಿನ ಪ್ರತಾಪಗೌಡ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ 3.5 ಕೋಟಿ ರೂ. ವೆಚ್ಚದಲ್ಲಿ ಗ್ರಂಥಾಲಯ, ಕಂಪ್ಯೂಟರ್ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಳ್ಳಲು ಉತ್ತಮ ಅವಕಾಶಗಳು ಇವೆ ಎಂದರು.
ತಹಶೀಲ್ದಾರ್ ಮಂಜುನಾಥ ಬೋಗಾವತಿ, ಮುಖಂಡ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಹನುಮಂತಪ್ಪ ಮುದ್ದಾಪೂರ, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಮೈಬುಸಾಬ ಮುದ್ದಾಪೂರ, ಎಂ. ಅಮರೇಶ, ಬಸನಗೌಡ ಪೊಲೀಸ ಪಾಟೀಲ, ನಾರಾಯಣಪ್ಪ ಕಾಸ್ಲಿ ಕೃಷ್ಣ ಡಿ. ಚಿಗರಿ, ಮಲ್ಲಯ್ಯ ಮುರಾರಿ, ಶಿವರೆಡ್ಡಿ, ಮಲ್ಲಯ್ಯ ಮಲ್ಕಾಪೂರ, ಶಿವು ಬ್ಯಾಳಿ, ರಮೇಶ ಕಾಸ್ಲಿ, ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ಇತರರು ಇದ್ದರು.
ಈ ವೇಳೆ ಪಟ್ಟಣದ ದೇವಾನಾಂಪ್ರಿಯ ಪದವಿ ಕಾಲೇಜಿನಲ್ಲಿ 1 ಕೋಟಿ ರೂ. ವೆಚ್ಚದ ಹೆಚ್ಚುವರಿ ಕೊಠಡಿ, 25 ಲಕ್ಷ ರೂ. ವೆಚ್ಚದ ಶಾಸಕರ ಭವನದ ಕಂಪೌಂಡ್ ಗೋಡೆ ಸೇರಿದಂತೆ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು. ಸೋಮನಾಥ ನಗರ ಸೇರಿದಂತೆ ವಿವಿಧೆಡೆ ಶಾಲಾ ಕೊಠಡಿ ಉದ್ಘಾಟಿಸಿದರು.
ಪಟ್ಟಣದ ಹಳೆಯ ಬಸ್ ನಿಲ್ದಾಣದಲ್ಲಿ ಮೊದಲಿನಂತೆ ಬಸ್ ನಿಲುಗಡೆ ಮಾಡುವಂತೆ ವ್ಯಾಪಾರಿಗಳು ಹಾಗೂ ಅಟೋ ಚಾಲಕರಿಂದ ಶಾಸಕ ಆರ್.ಬಸನಗೌಡ ತುರ್ವಿಹಾಳ ಅಹವಾಲು ಸ್ವೀಕರಿಸಿದರು. ಚೆನ್ನಮ್ಮ ವೃತ್ತದಿಂದ ಅಶೋಕ ವೃತ್ತದವರೆಗೆ ಪಾದಯಾತ್ರೆ ನಡೆಸಿದ ಶಾಸಕರು ಖುದ್ದು ಸಮಸ್ಯೆ ಆಲಿಸಿದರು.