×
Ad

ಹಸಿಕಸ-ಒಣಕಸ ಬೇರ್ಪಡಿಸದೆ ನೀಡಿದರೆ ದಂಡ: ಸಿಂಧನೂರು ನಗರಸಭೆ ಪೌರಾಯುಕ್ತ ಎಚ್ಚರಿಕೆ

Update: 2025-02-25 13:07 IST

ಸಿಂಧನೂರು: ನಗರದ ಸಾರ್ವಜನಿಕರು ಕಡ್ಡಾಯವಾಗಿ ತಮ್ಮ ಮನೆಯ ತ್ಯಾಜ್ಯವನ್ನು ವಿಂಗಡಣೆ ಮಾಡಿ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ನೀಡಲು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮನವಿ ಮಾಡಿದ್ದಾರೆ.

ಸ್ವಚ್ಛ ಭಾರತ ಅಭಿಯಾನದ ನಿಯಮಾವಳಿಗಳ ಪ್ರಕಾರ ಮನೆ, ಅಂಗಡಿ, ಶಾಲೆ, ಹೋಟೆಲ್ ಇನ್ನಿತರ ಸಂಸ್ಥೆಗಳ ತ್ಯಾಜ್ಯ ಪ್ರತ್ಯೇಕಿಸಿ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈಗಾಗಲೇ ನಗರಸಭೆ ಅನೇಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿದ್ದರೂ ತ್ಯಾಜ್ಯ ಪ್ರತ್ಯೇಕಿಸಿ ನೀಡುತ್ತಿಲ್ಲ. ಎಲ್ಲಾ ಸಾರ್ವಜನಿಕರು ಸ್ವಚ್ಛ ಹಾಗೂ ಸ್ವಸ್ಥ ಸಿಂಧನೂರುಗಾಗಿ ತಕ್ಷಣವೇ ಕಸ ವಿಂಗಡಿಸಿ ನೀಡಲು ಮುಂದಾಗಬೇಕು. ಒಂದು ವೇಳೆ ಕಸ ವಿಂಗಡಿಸದೇ ವಾಹನಗಳಿಗೆ ನೀಡಿದ್ದಲ್ಲಿ ಅಂಥವರಿಗೆ ಮೊದಲ ಹಂತದಲ್ಲಿ ಕಾಯ್ದೆಯನ್ವಯ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಅನೇಕ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿದ್ದು, ಆಸ್ಪತ್ರೆಯ ತ್ಯಾಜ್ಯ ಸಾಮಾನ್ಯ ಕಸದೊಂದಿಗೆ ನೀಡಿದರೆ ಅಂಥ ಆಸ್ಪತ್ರೆಗೆ ಮೊದಲ ಹಂತದಲ್ಲಿ ನಗರಸಭೆಯಿಂದ 25 ಸಾವಿರ ರೂ. ದಂಡ ವಿಧಿಸಲಾಗುವುದು. ಇದು ಪುನರಾವರ್ತಿತವಾದರೆ 2 ಲಕ್ಷ ರೂ. ವರೆಗೆ ದಂಡ ವಿಧಿಸಿ ಅಂತ ಆಸ್ಪತ್ರೆಯ ಪರವಾನಿಗೆ ರದ್ದುಪಡಿಸಿ, ಸಂಬಂಧಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಯಾವುದೇ ಕಾರಣಕ್ಕೂ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಮೆಡಿ ವೇಸ್ಟ್ ನೀಡುವುನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ನಮ್ಮ ಸಂಸ್ಥೆಯ ಯಾವುದೇ ನೌಕರರು ಸದರಿ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ನಗರಸಭೆಯ ಗಮನಕ್ಕೆ ತರಬಹುದು. ಸ್ವಚ್ಛ ಸಿಂಧನೂರು ಮಾಡಲು ನಗರಸಭೆಯೊಂದಿಗೆ ಕೈ ಜೋಡಿಸಿ ಎಂದು ಅವರು ಪ್ರಕಟನೆ ಮೂಲಕ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News