ಲಿಂಗಸುಗೂರು | ಚರಂಡಿಗಿಳಿದ ಸರಕಾರಿ ಬಸ್
Update: 2025-08-02 10:41 IST
ರಾಯಚೂರು: ಸರಕಾರಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ ಘಟನೆ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ಹೂನೂರು ಗ್ರಾಮದಲ್ಲಿ ನಡೆದಿದೆ.
ಅಂಕಲಿಮಠ - ಮಂಗಳೂರಿಗೆ ಬರುವ ಸರಕಾರಿ ಬಸ್ಸಿನ ಮುಂದಿನ ಚಕ್ರ ಚರಂಡಿನಲ್ಲಿ ಸಿಲುಕಿಕೊಂಡಿದೆ.
ಇಲ್ಲಿ ಕಚ್ಚಾ ರಸ್ತೆಯಿದ್ದು, ಮಳೆ ಕಾರಣ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗಿಲ್ಲ.
ಮಳೆ ಸುರಿದರೆ ಇಲ್ಲಿನ ರಸ್ತೆ ಕೆಸರುಗದ್ದೆಯಂತಾಗುತ್ತದೆ. ವಾಹನ ಸವಾರರಿಗೆ ಸಂಚಾರ ಮಾಡಲು ಹಾಗೂ ಗ್ರಾಮದ ಜನರಿಗೆ ಓಡಾಡಲು ತೊಂದರೆ ಉಂಟಾಗುತ್ತದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸಿಸಿ ರಸ್ತೆ ಮಾಡಬೇಕು ಎಂದು ಲಿಂಗಸುಗೂರು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮನವಿ ಮಾಡಿದರು ಎನ್ನು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.