ರಾಯಚೂರು | ಚಲಿಸುತ್ತಿದ್ದ ಆಂಬುಲೆನ್ಸ್ ನಲ್ಲಿ ಆಕಸ್ಮಿಕ ಬೆಂಕಿ ; ತಪ್ಪಿದ ಭಾರಿ ಅನಾಹುತ
Update: 2025-02-10 21:41 IST
ರಾಯಚೂರು : ನಗರದಿಂದ ತಾಲೂಕಿನ ಆಶಾಪುರ ಗ್ರಾಮಕ್ಕೆ ಮೃತದೇಹ ಸಾಗಣೆ ಮಾಡುವಾಗ ಚಲಿಸುತ್ತಿದ್ದ ಖಾಸಗಿ ಆಂಬುಲೆನ್ಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತದೇಹವನ್ನು ಕುಟುಂಬ ಸದಸ್ಯರು ಅಶಾಪುರ ಗ್ರಾಮಕ್ಕೆ ಸಾಗಣೆ ಮಾಡುವಾಗ ಆಂಬುಲೆನ್ಸ್ ನ ಇಂಜಿನ್ ಬಿಸಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಚಾಲಕನಿಗೆ ಕನ್ನಡಿಯಲ್ಲಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತು ವಾಹನ ನಿಲ್ಲಿಸಿದ್ದಾನೆ. ಬಳಿಕ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾನೆ.
ಅಂಬುಲೆನ್ಸ್ ನಲ್ಲಿ ಮೃತದೇಹದ ಜೊತೆಗೆ ಮೂರು ಜನ ಕುಟುಂಬ ಸದಸ್ಯರು ಕೂತಿದ್ದರು. ಚಾಲಕ ಸೇರಿ ನಾಲ್ಕು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.