×
Ad

ರಾಯಚೂರು | ಗಂಡು ಮಗುವಿನ ಜೈವಿಕ ಪಾಲಕರ ಪತ್ತೆಗೆ ಮನವಿ

Update: 2025-08-26 21:50 IST

ರಾಯಚೂರು: ತಾಲೂಕಿನ ಕಲ್ಮಲಾ ಗ್ರಾಮದ ಕಾಲುವೆ ಪಕ್ಕದಲ್ಲಿ ಆ.19ರಂದು ಆಗ ತಾನೇ ಜನಿಸಿದ ಗಂಡು ಮಗುವನ್ನು ಯಾರೋ ಬಿಟ್ಟು ಹೋಗಿದ್ದು, ಜೈವಿಕ ಪಾಲಕರ ಪತ್ತೆಗೆ ಕೋರಲಾಗಿದೆ.

ಸಾರ್ವಜನಿಕರು ಮಗು ಅಳುವುದನ್ನು ಗಮನಿಸಿ ಮಗುವನ್ನು ರಕ್ಷಿಸಿ ಕಲ್ಮಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಮಕ್ಕಳ ಸಹಾಯವಾಣಿ ಘಟಕಕ್ಕೆ ಕರೆ ಮಾಡಿ ತಿಳಿಸಿರುತ್ತಾರೆ. ನಂತರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ನಿರ್ದೇಶದಂತೆ ಶಿಶು ಅಭಿವೃದ್ದಿ ಯೋಜನೆ ಗಿಲ್ಲೆಸೂಗೂರು ಸಿಬ್ಬಂದಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಘಟಕ ಸಿಬ್ಬಂದಿಗಳ ಸಹಕಾರದಲ್ಲಿ ಈ ಮಗುವನ್ನು ಪೋಷಣೆ ಮತ್ತು ರಕ್ಷಣೆಗಾಗಿ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ಮಗುವಿನ ಜೈವಿಕ ಪಾಲಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರ್ಯಲಯ ಮನೆ ಸಂಖ್ಯೆ 1-9-138, ಆಝಾದ್‌ ನಗರ, ಪಶ್ಚಿಮ ಪೋಲಿಸ್ ಠಾಣೆ ಹಿಂದುಗಡೆ, ಮಾರಮ್ಮ ಗುಡಿ ಹತ್ತಿರ, ರಾಯಚೂರು ಇಲ್ಲಿಗೆ ಸಂಪರ್ಕಿಸಬಹುದಾಗಿದೆ. ಜೈವಿಕ ಪಾಲಕರು ಪತ್ತೆಯಾಗದಿದ್ದಲ್ಲಿ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ಕಾನೂನಿನಾತ್ಮಕವಾಗಿ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 08532-2262266, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮೊಬೈಲ್ ಸಂಖ್ಯೆ: 7829981827, ರಕ್ಷಣಾಧಿಕಾರಿ (ಅಸಾಂಸ್ಥಿಕ) ಮೊಬೈಲ್ ಸಂಖ್ಯೆ: 8660627793ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News