ರಾಯಚೂರು | ಮಟ್ಕಾ ಅಡ್ಡೆಗೆ ದಾಳಿ : ನಾಲ್ವರು ಆರೋಪಿಗಳ ಬಂಧನ
Update: 2025-08-18 21:24 IST
ರಾಯಚೂರು: ಮಟ್ಕಾ ಚೀಟಿ ಬರೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಾನ್ವಿ ಠಾಣೆಯ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ 10,850ರೂ. ನಗದು, ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಹುಸೇನಿ, ಈರಣ್ಣ, ಹನುಮಂತ, ರಮೇಶ್ ಬಂಧಿತ ಆರೋಪಿಗಳು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಡಿಸಿಆರ್‌ಬಿ ಘಟಕದ ಪಿ.ಐ ತಿಮ್ಮಣ್ಣ, ಸೋಮಶೇಖರ್ ಕೆಂಚರೆಡ್ಡಿ ಅವರ ನೇತೃತ್ವದ ಪೊಲೀಸರ ತಂಡ ಮಾನವಿ ಪಟ್ಟಣದ ಅಂಬೇಡ್ಕರ್ ನಗರ, ಜಡೆ ಬಸ್ಸಪ್ಪನ ಗುಡಿಯ ಬಳಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.