×
Ad

ರಾಯಚೂರು | ಕಾಲು ಜಾರಿ ಕೆರೆಗೆ ಬಿದ್ದು ಬಾಲಕ ಮೃತ್ಯು

Update: 2025-09-05 23:48 IST

ರಾಯಚೂರು: ವಾಲಿಬಾಲ್ ಆಟವಾಡಲು ತೆರಳಿದ ವೇಳೆ ಕಾಲು ಕಾರಿ ಕೆರೆಗೆ ಬಿದ್ದು ಬಾಲಕನೊರ್ವ ಮೃತಪಟ್ಟಿರುವ ಘಟನೆ ರಾಯಚೂರಿನ ಕೃಷ್ಣಗಿರಿ ಹಿಲ್ಸ್ ನಲ್ಲಿ ನಡೆದಿದೆ.

ಮೃತ ಬಾಲಕನನ್ನು ಗೌತಮ್ ( 15 ) ಎಂದು ಹೇಳಲಾಗಿದೆ.

ಗೌತಮ್ ಸ್ನೇಹಿತನ ಜೊತೆಗೆ ಕೃಷ್ಣ ಗಿರಿ ಹಿಲ್ಸ್ ಗೆ ವಾಲಿಬಾಲ್ ಆಡಲು ತೆರಳಿದ್ದ ವೇಳೆ ಕಾಲು ಕಾರಿ ಕೆರೆಗೆ ಬಿದ್ದಿದ್ಧಾನೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರ ತಂಡ ಶೋಧ ಕಾರ್ಯ ನಡೆಸಿ ಸಂಜೆ 5 ಗಂಟೆ ವೇಳೆಗೆ ಬಾಲಕನ ಮೃತದೇಹವನ್ನು ನೀರಿನಿಂದ ಹೊರ ತೆಗೆದಿದ್ದಾರೆ.

ಮೃತನ ಪೊಷಕರು ಮೂಲತಃ ರಾಜಸ್ಥಾನದವರು ಎಂದು ತಿಳಿದುಬಂದಿದೆ. ರಾಯಚೂರಿನ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News