ರಾಯಚೂರು | ಅಣು ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ನಾಗರಿಕರ ವೇದಿಕೆಯಿಂದ ಪ್ರತಿಭಟನೆ
ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರದ ಅಧಿಕಾರಿಗಳು ಆರ್‌ಟಿಪಿಎಸ್ ಘಟಕಕ್ಕೆ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿರುವುದನ್ನು ಖಂಡಿಸಿ, ರಾಯಚೂರು ಜಿಲ್ಲಾ ನಾಗರಿಕರ ವೇದಿಕೆಯ ನೇತೃತ್ವದಲ್ಲಿ ಗುರುವಾರ ನೂತನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಭಾರೀ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಅಣು ವಿದ್ಯುತ್ ಸ್ಥಾವರವು ಜೀವ ವಿರೋಧಿ, ಪರಿಸರ ವಿರೋಧಿ ಹಾಗೂ ವಿನಾಶಕಾರಿ ಯೋಜನೆ ಆಗಿದ್ದು, ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಸ್ಥಾಪಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲಾಡಳಿತವಾಗಲಿ ಅಥವಾ ಆರ್‌ಟಿಪಿಎಸ್ ಅಧಿಕಾರಿಗಳಾಗಲಿ, ಅಣು ವಿದ್ಯುತ್ ಸ್ಥಾವರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದಲ್ಲಿಯೇ ಯಾವುದೇ ಅಧಿಕಾರಿಗಳಿಗೆ ಸ್ಥಳ ವೀಕ್ಷಣೆಗೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.
ಪ್ರಧಾನಮಂತ್ರಿಯವರಿಗೆ ಸಲ್ಲಿಸಲಾದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ಸ್ವೀಕರಿಸಿ, “ರಾಯಚೂರು ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರಕ್ಕೆ ಅವಕಾಶ ನೀಡುವುದಿಲ್ಲ” ಎಂಬ ಭರವಸೆಯನ್ನು ಪ್ರತಿಭಟನಾಕಾರರಿಗೆ ನೀಡಿದರು.
ಪ್ರತಿಭಟನೆಯಲ್ಲಿ ಡಾ.ಬಸವರಾಜ್ ಕಳಸ, ವಕೀಲ ಎಸ್. ಮಾರೆಪ್ಪ, ಅಶೋಕ್ ಕುಮಾರ್ ಜೈನ್, ರಾಜ್ಯ ರೈತ ಸಂಘದ ಚಾಮರಸ ಮಾಲಿಪಾಟೀಲ್, ಪ್ರಭಾಕರ್, ಆರ್‌ಟಿಪಿಎಸ್ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಅಯ್ಯಣ್ಣ ಮಹಾಮನೆ, ವಕೀಲರ ಸಂಘದ ಉಪಾಧ್ಯಕ್ಷ ನಜೀರ್ ಅಹ್ಮದ್ ಶೇರ್ ಅಲಿ, ಅನಿತಾ ನವಲ್ಕಲ್, ನಿವೇದಿತ, ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯರಾಜೇಂದ್ರ, ಎಸ್‌ಯುಸಿಐನ ವೀರೇಶ್, ಚನ್ನಬಸವ ಜಾನೇಕಲ್, ಸಿಂಧನೂರಿನ ಚಂದ್ರಶೇಖರ್ ಗೊರೆಬಾಳ್, ಕೊಪ್ಪಳದ ಡಿ.ಎಚ್. ಪೂಜಾರ್, ಗ್ರೀನ್ ರಾಯಚೂರಿನ ರಾಜೇಂದ್ರ ಶಿವಾಳೆ, ಸಾಹಿತಿಗಳಾದ ಬಾಬು ಬಂಡಾರಿಗಲ್, ಆಂಜನೇಯ ಜಾಲಿಬೆಂಚಿ, ಸಿಪಿಐಎಂನ ಕೆ.ಜಿ. ವೀರೇಶ್, ಹೆಚ್. ಪದ್ಮ, ಅಮರೇಗೌಡ ಪಾಟೀಲ್, ಡಾ. ಜಗದೀಶ್ ಪೂರ ತಿಪ್ಪಲಿ, ಎಸ್. ಹನುಮಂತಪ್ಪ, ವೆಂಕಟರೆಡ್ಡಿ ದಿನ್ನಿ, ಪ್ರಸನ್ನ ಆಲಮ್ಪಲ್ಲಿ, ಶ್ರೀನಿವಾಸ್ ಕಲವಲ ದೊಡ್ಡಿ, ತಾಯಣ್ಣ ಗದಾರ್, ವಿನಯ್ ಕುಮಾರ್ ಚಿತ್ರಗಾರ, ಬಸವರಾಜ್ ಮಿಮಿಕ್ರಿ, ಅಶ್ವತ್ ರಾವ್, ನರಸಿಂಹಲು ಮೈತ್ರಿಕರ್, ರಾಮಣ್ಣ ಮೇದಾರ್, ನರಸಪ್ಪ ಬಾಡಿಯಲ್, ಜಾನ್ ವೆಸ್ಲಿ, ಸಾದಿಖಾನ್ ಯರಗೇರಾ, ನಾಸಿರ್ ಹೊಸೂರ್, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವೀರೇಶ್ ಸೋನಾ, ಶಾಹಿನ ಕಾಲೇಜಿನ ಪ್ರಾಚಾರ್ಯ ಆದಿಲ್, ಎಂ.ಆರ್. ಭೇರಿ, ಆಂಜನೇಯ ಕುರುಬದೊಡ್ಡಿ, ಮೊಹಮ್ಮದ್ ಇಸಾಕ್, ವಿಕ್ರಂ, ನರಸಿಂಹಮೂರ್ತಿ, ಕಾಮರಾಜ್ ಪಾಟೀಲ್ ಸೇರಿದಂತೆ ರೈತಪರ, ಕನ್ನಡಪರ ಸಂಘಟನೆಗಳು, ಆರ್‌ಟಿಪಿಎಸ್ ಹೊರಗುತ್ತಿಗೆ ನೌಕರರು ಹಾಗೂ ದೇವಸುಗೂರಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.