×
Ad

ಸಿಂಧನೂರು | ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರಾಗಿ ಎಂ. ದೊಡ್ಡಬಸವರಾಜ್, ಉಪಾಧ್ಯಕ್ಷರಾಗಿ ಸಿದ್ದನಗೌಡ ಮಾಟೂರು ಅವಿರೋಧ ಆಯ್ಕೆ

Update: 2026-01-30 14:56 IST

ಸಿಂಧನೂರು: ಸ್ಥಳೀಯ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಎಂ. ದೊಡ್ಡಬಸವರಾಜ್ ಹಾಗೂ ಉಪಾಧ್ಯಕ್ಷರಾಗಿ ಸಿದ್ದನಗೌಡ ಮಾಟೂರು ಅವರು ಮೂರನೇ ಅವಧಿಗೆ (ಹ್ಯಾಟ್ರಿಕ್) ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಇಲ್ಲಿನ ಪಿಎಲ್‌ಡಿ ಬ್ಯಾಂಕ್ ಕಚೇರಿಯಲ್ಲಿ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಅರುಣಕುಮಾರ್ ದೇಸಾಯಿ ಅವರು ಚುನಾವಣಾ ಪ್ರಕ್ರಿಯೆ ನಡೆಸಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.

ಪಿಎಲ್‌ಡಿ ಬ್ಯಾಂಕ್‌ನ 63 ವರ್ಷಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸತತ ಮೂರನೇ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮೊದಲಿಗರು ಎಂಬ ಗೌರವಕ್ಕೂ ಎಂ. ದೊಡ್ಡಬಸವರಾಜ್ ಪಾತ್ರರಾದರು.

ನಂತರ ಮಾತನಾಡಿದ ಎಂ. ದೊಡ್ಡಬಸವರಾಜ್, ರೈತರು ಹಾಗೂ ಎಲ್ಲಾ ನಿರ್ದೇಶಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಸದಾ ಋಣಿ. ಬ್ಯಾಂಕ್ ಅನ್ನು ಸಹಕಾರ ಮತ್ತು ಪಾರದರ್ಶಕತೆಯೊಂದಿಗೆ ಮುನ್ನಡೆಸುತ್ತೇನೆ. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು. ಮುಖ್ಯವಾಗಿ ಅವಕಾಶ ವಂಚಿತರಿಗೆ ಆದ್ಯತೆ ನೀಡಲಾಗುವುದು. 2026ರಿಂದ 2031ರವರೆಗೆ ಆಡಳಿತ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು.

ಸಾಲಗುಂದಾ ಕ್ಷೇತ್ರದಿಂದ ನಿರ್ದೇಶಕರಾಗಿ ಕೆ.ಕರಿಲಿಂಗಪ್ಪ, ಗುಡುದೂರು ಕ್ಷೇತ್ರದಿಂದ ರಮೇಶ ಅಮರಪ್ಪ, ಮಾಡಸಿರವಾರದಿಂದ ರಾಮಣ್ಣ ಗಿಣಿವಾರ, ಜವಳಗೇರಾದ ರೇವಣಸಿದ್ದಪ್ಪ, ಬಳಗಾನೂರು ಕ್ಷೇತ್ರದಿಂದ ಲಿಂಗಪ್ಪ, ಕುನ್ನಟಗಿಯ ವೆಂಕಣ್ಣ ತಿಪ್ಪನಹಟ್ಟಿ, ಹುಡಾದಿಂದ ರಮೇಶ ಮುಕ್ಕುಂದಾ, ವಲ್ಕಂದಿನ್ನಿ ಕ್ಷೇತ್ರದಿಂದ ಹನುಮಂತಮ್ಮ ಮಣ್ಣಿಕೇರಿ ಕ್ಯಾಂಪ್, ಗೋರೆಬಾಳದಿಂದ ಶಿವಪ್ಪ ಸಾಸಲಮರಿ, ತುರುವಿಹಾಳದಿಂದ ಲಲಿತಮ್ಮ ಉಮಲೂಟಿ, ಜಾಲಿಹಾಳದಿಂದ ಹೇಮಾವತಿ ಭೀಮರಾಜ ಕ್ಯಾಂಪ್, ಕೆ.ಬಸಾಪರ ಕ್ಷೇತ್ರದ ಈರಣ್ಣ ಅವರೂ ಕೂಡ ನಿರ್ದೇಶಕರಾಗಿ ಅವಿರೋಧ ಆಯ್ಕೆಗೊಂಡರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಭೀಮಣ್ಣ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ, ನಗರ ಮಂಡಲ ಅಧ್ಯಕ್ಷ ಸಿದ್ರಾಮೇಶ ಮನ್ನಾಪುರ, ಸಿಂಧನೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಮರೇಶ ಅಂಗಡಿ, ಸಹಾಯಕ ಚುನಾವಣಾಧಿಕಾರಿ ಕಿರಣಕುಮಾರ್, ಪಿಎಲ್‌ಡಿ ಬ್ಯಾಂಕ್ ಮ್ಯಾನೇಜರ್ ಮಲ್ಲಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News