×
Ad

ರಾಯಚೂರು | ನಕಲಿ ಮೈಕ್ರೋ ಫೈನಾನ್ಸ್ ರಿಕವರಿ ಏಜೆಂಟ್ ಸೇರಿ ನಾಲ್ವರ ಬಂಧನ

Update: 2025-01-25 14:37 IST

ಬಂಧಿತ ಆರೋಪಿಗಳು

ರಾಯಚೂರು : ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ರೈತನಿಂದ ಹಣ ವಸೂಲಿ ಮಾಡಲು ತೊಡಗಿದ್ದ ಆರೋಪದ ಮೇಲೆ ರಾಯಚೂರು ಗ್ರಾಮೀಣ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಫಯಾಜ್, ಶೇಖ್ ಎಂಡಿ ಆಯ್ಯುಬ್, ಸೈಯದ್ ಶಹಬಾಜ್ ಅಹ್ಮದ್, ಹಾರೂನ್ ರಶೀದ್ ಎಂದು ಗುರುತಿಸಲಾಗಿದೆ.

ಆರೋಪಿಗಳ ಪೈಕಿ ಓರ್ವ ಬಜಾಜ್ ಫೈನಾನ್ಸ್ ನ ರಿಕವರಿ ಸಿಬ್ಬಂದಿಯಾಗಿರುವ ಶೇಕ್ ಎಂಡಿ ಆಯ್ಯುಬ್ ಮೂರು ಜನರೊಂದಿಗೆ ಸೇರಿ ಮೊಬೈಲ್ ಆ್ಯಪ್ನಲ್ಲಿ ಫೈನಾನ್ಸ್ಗಳ ಸಾಲ ಬಾಕಿ ಇರುವವರನ್ನು ಗುರುತಿಸಿ, ಟಾರ್ಗೆಟ್ ಮಾಡುತ್ತಿದ್ದರು. ರಸ್ತೆ ಮಧ್ಯದಲ್ಲೇ ಬೈಕ್, ವಾಹನಗಳನ್ನ ಅಡ್ಡಗಟ್ಟಿ ಸಾಲ ತೀರಿಸುವಂತೆ ಬೆದರಿಕೆ ಹಾಕುತ್ತಿದ್ದರು ಎಂದು ಹೇಳಲಾಗಿದೆ.

ಪ್ರಕರಣದ ಹಿನ್ನೆಲೆ :

ದೂರುದಾರ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುಂಡ್ಲೂರು ಗ್ರಾಮದ ಫಯಾಜ್ ಜ.17 ರಂದು ರಾಯಚೂರಿನ ಹತ್ತಿ ಮಾರುಕಟ್ಟೆಗೆ ಮಹೇಂದ್ರ ಪಿಕಪ್ ನಲ್ಲಿ ಹತ್ತಿ ಮಾರಾಟ ಮಾಡಿ ಊರಿಗೆ ಹೋಗುವಾಗ ಯರಮರಸ್ ಸಮೀಪ ಗಾಡಿಯನ್ನು ಅಡ್ಡಗಟ್ಟಿದ ಆರೋಪಿಗಳು ನಿಮ್ಮ ಫೈನಾನ್ಸ್ ಹಣ ಬಾಕಿ ಇದೆ ಕಟ್ಟಿ ಗಾಡಿ ವಾಪಸ್ ತೆಗೆದುಕೊಂಡು ಹೋಗಿ ಎಂದು ಮಹೇಂದ್ರ ಪಿಕಪ್ ತೆಗೆದುಕೊಂಡು ಹೋಗಿದ್ದಾರೆ.

ಫಯಾಜ್ ಅವರು ತಮ್ಮ ಊರಿಗೆ ಹೋಗಿ ಶಹಪುರದಲ್ಲಿನ ಕನಕದುರ್ಗ ಫೈನಾನ್ಸ್ ಕಂಪನಿಗೆ ಜ.21 ರಂದು ತಮ್ಮ ಲೋನ್ ಬಾಕಿ 56,750 ರೂ. ಕಟ್ಟಿ ಮರಳಿ ರಾಯಚೂರಿಗೆ ಬಂದಿದ್ದಾರೆ.

ರಾಯಚೂರಿನ ಚಂದ್ರಬಂಡಾ ರಸ್ತೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ನಿಂತ ಆರೋಪಿಗಳು ಮಹೇಂದ್ರ ಪಿಕಪ್ ನೀಡದೇ ಫಯಾಜ್ ಅವರಿಗೆ ಜೀವ ಬೆದರಿಕೆ ಹಾಕಿ 12 ಸಾವಿರ ರೂ. ಕೇಳಿದ್ದಾರೆ. ಜ.22 ರಂದು ಫಯಾಜ್ ಅವರು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪಿಎಸ್ಐ ಪ್ರಕಾಶ್ ಡಂಬಲ ನೇತೃತ್ವದ ತಂಡ ತನಿಖೆ ನಡೆಸಿ ಜ.23 ರಂದು ಆರೋಪಿಗಳನ್ನು ಬಂಧಿಸಿದ್ದಾರೆ.

ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಒಂದೆಡೆಯಾದರೆ, ಇನ್ನೊಂದು ಕಡೆ ನಕಲಿ ಸಾಲ ರಿಕವರಿ ಟೀಂ ವಸೂಲಿ ದಂಧೆ ನಡೆಸಿರುವುದು ಬೆಳಕಿಗೆ ಬಂದಿದೆ. ಫೈನಾನ್ಸ್ ಸಾಲ ರಿಕವರಿ ಟೀಂ ಹೆಸರಲ್ಲಿ ಕಿರುಕುಳ ನೀಡುತ್ತಿದ್ದ ನಾಲ್ವರು ಆರೋಪಿಗಳನ್ನು ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News