×
Ad

ರಾಯಚೂರು | ಗ್ಯಾಸ್ ಸಿಲಿಂಡರ್ ಸ್ಫೋಟ ಹೋಟೆಲ್ ಬೆಂಕಿಗಾಹುತಿ

Update: 2025-07-12 23:00 IST

ರಾಯಚೂರು : ಜಿಲ್ಲೆಯ ಮಸ್ಕಿ ತಾಲೂಕಿನ ಬುದ್ದಿನ್ನಿ ಗ್ರಾಮದ ನಿವಾಸಿ ವೀರೇಶ ಸ್ವಾಮಿ ಎಂಬವರ ಹೋಟೆಲ್‌ನಲ್ಲಿ ಶುಕ್ರವಾರ ಬೆಳಗ್ಗೆ 8:30ಕ್ಕೆ ಗ್ಯಾಸ್ ಸಿಲಿಂಡರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸಿಲಿಂಡರ್ ಸ್ಫೋಟವಾಗಿರುವುದು ತಿಳಿದುಬಂದಿದೆ.

ಗ್ಯಾಸ್ ಸಿಲಿಂಡರ್‌ನಲ್ಲಿ ಬೆಂಕಿ ಕಾಣಿಸಿಕೊಂಡದ್ದನ್ನು ಗಮನಿಸಿದ ಹೋಟೆಲ್ ಮಾಲಕ ವೀರೇಶ ಹೋಟೆಲಿನಲ್ಲಿ ಕುಳಿತಿದ್ದ 20ಕ್ಕೂ ಅಧಿಕ ಜನರನ್ನು ಹೊರಗೆ ಕಳುಹಿಸಿದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಫೋಟದ ತೀವ್ರತೆಗೆ ಹೋಟೆಲ್‌ನ ಛಾವಣಿ, ಪಾತ್ರೆಗಳು ಹಾನಿಗೊಳಗಾಗಿವೆ. ಬುದ್ದಿನ್ನಿ ಗ್ರಾಮದ ಸ್ಥಳೀಯರ ಸಹಕಾರ ದಿಂದ ಅಗ್ನಿಶಾಮಕ ಅಧಿಕಾರಿಗಳು ಬೆಂಕಿ ನಂದಿಸಿದರು.

ಜೀವನಕ್ಕೆ ಆಸರೆಯಾಗಿದ್ದ ಹೋಟೆಲ್ ಸುಟ್ಟಿದ್ದರಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸರಕಾರ ಸಹಾಯ ಮಾಡಬೇಕು ಎಂದು ಹೋಟೆಲ್ ಮಾಲಕ ವೀರೇಶ ಸ್ವಾಮಿ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News