×
Ad

Raichur | ಗೊರೆಬಾಳದಲ್ಲಿ ಬೀದಿ ನಾಯಿಗಳ ದಾಳಿಗೆ ಮೇಕೆ, ಕೋಳಿ ಬಲಿ

Update: 2025-11-13 21:51 IST

ಲಿಂಗಸುಗೂರು : ತಾಲೂಕಿನ ಗೊರೆಬಾಳ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಯಿಂದ ಮೇಕೆ ಮತ್ತು ಕೋಳಿ ಬಲಿಯಾದ ಘಟನೆ ವರದಿಯಾಗಿದೆ.

ಗ್ರಾಮದ ದುರುಗಪ್ಪ ಎಂಬುವವರ ಮೇಕೆಯ ಮೇಲೆ ಹಾಗೂ ರವಿ ಕುಮಾರ ಎಂಬ ವ್ಯಕ್ತಿಯ ಕೋಳಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಎರಡೂ ಸಾವನ್ನಪ್ಪಿವೆ. ಈ ದಾಳಿಯಿಂದ ಮೇಕೆ ಮಾಲಕನಿಗೆ ಸುಮಾರು 12,000 ರೂ. ಹಾಗೂ ಕೋಳಿ ಮಾಲಕನಿಗೆ 2,000 ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

ಗ್ರಾಮಸ್ಥರು ಸ್ಥಳೀಯ ಆಡಳಿತ ತಕ್ಷಣ ಕ್ರಮ ಕೈಗೊಂಡು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News