ರಾಯಚೂರು | ಜ.30ರಂದು ಆರೆಸ್ಸೆಸ್, ಹಿಂದೂರಾಷ್ಟ್ರ ವಿರೋಧಿಸಿ ಲಿಂಗಸೂಗೂರನಲ್ಲಿ ಜನತಾ ಸಮಾವೇಶ : ಎಂ.ಆರ್.ಬೇರಿ
ರಾಯಚೂರು : ಜ.30ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಆರೆಸ್ಸೆಸ್ ಕೊಂದ ಶೋಕದಿನ ದಂದು ನಾಳೆ ಲಿಂಗಸೂಗೂರನಲ್ಲಿ ಆರೆಸ್ಸೆಸ್, ಹಿಂದೂರಾಷ್ಟ್ರ ವಿರೋಧಿ ಜನತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮನುವಾದಿ-ಫ್ಯಾಸಿಸ್ಟ್ ವಿರೋಧಿ ಜನತಾರಂಗದ ಮುಖಂಡ ಎಂ.ಆರ್.ಬೇರಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.30 ರಂದು ಬೆಳಿಗ್ಗೆ 11ಕ್ಕೆ ಆಯ್ದಕ್ಕಿ ಲಕ್ಕಮ್ಮ ಮೈದಾನ, ಜಿ.ಕೆ.ರೆಸಡೆನ್ಸಿ ಎದರುಗಡೆ ಮೈದಾನ ಲಿಂಗಸೂಗೂರನಲ್ಲಿ ಸಮಾವೇಶ ನಡೆಯಲಿದ್ದು, ದುರಾಡಳಿತ ಹಾಗೂ ದುಷ್ಟ ನೀತಿಗಳ ಮೂಲಕ ಮೋದಿ ಸರಕಾರವು ದೇಶ ವಿರೋಧಿ, ಜನವಿರೋಧಿ ಫ್ಯಾಸಿಸ್ಟ್ ಶಕ್ತಿಯಾಗಿ ನಿಂತಿದೆ. ಇದರ ವಿರುದ್ದ ಎಲ್ಲಾ ದಮನಿತ ಹಾಗೂ ದುಡಿಯುವ ಜನ ಪ್ರಜಾಪ್ರಭುತ್ವವಾದಿಗಲು ಎಲ್ಲಾ ಹಚಿತದಲ್ಲಿ ಐಕ್ಯ ಹೋರಾಟ ಕಟ್ಟುವುದು ಅತ್ಯಂತ ಅಗತ್ಯತೆ ಇದೆ.
ಈ ಹಿನ್ನಲೆಯಲ್ಲಿ 20ಕ್ಕೂ ಹೆಚ್ಚು ದಲಿತ, ಹಿಂದುಳಿದ, ಧಾರ್ಮಿಕ ಅಲ್ಪಸಂಖ್ಯಾತ, ಮಹಿಳಾ, ಸಾಂಸ್ಕೃತಿಕ, ರೈತರ, ಕಾರ್ಮಿಕರ, ಕನ್ನಡ ಪರ, ಬಹುತೇಕ ಜನಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಮನುವಾದಿ ಫ್ಯಾಸಿಸ್ಟ್ ವಿರೋಧಿ ಜನತಾರಂಗ ಎಂಬ ಸಂಯುಕ್ತವೇದಿಕೆ ನಿರ್ಮಾಣ ಮಾಡಿದ್ದು, ಈ ಜನತಾರಂಗ ನೇತೃತ್ವದಲ್ಲಿ ಜ.30 ರಂದು ಲಿಂಗಸೂಗೂರನಲ್ಲಿ ಬೃತಹ ಸಮಾವೇಶ ಏರ್ಪಡಿಸಲಾಗಿದೆ.
ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ದಲಿತ, ಹಿಂದುಳಿದ, ಧಾರ್ಮಿಕ ಅಲ್ಪಸಂಖ್ಯಾತ, ಕನ್ನಡಪರ ಮಹಿಳಾ, ರೈತರ, ಕಾರ್ಮಿಕ, ವಿದ್ಯಾರ್ಥಿ-ಯುವಜನ, ಸಾಂಸ್ಕೃತಿಕ ಚಳುವಳಿಗಾರರು ಚಿಂತಕರು ಭಾಗವಹಿಸಲಿದ್ದಾರೆ. ಜೊತೆಗೆ ಮುಸ್ಲಿಂ, ಕ್ರೈಸ್ತ, ಜೈನ ,ಬೌದ್ದ ಹಾಗೂ ಲಿಂಗಾಯತ ಧರ್ಮದ ಗುರುಗಳು ಹಾಗೂ ಮುಖಂಡರಿಗೂ ಆಮಂತ್ರಣ ನೀಡಲಾಗಿದೆ. ಬುದ್ದ ಹಾಗೂ ಬಸವ ಪರಂಪರೆಯ ಹೋರಾಟವನ್ನು ಪ್ರತಿಪಾದಿಸುವ ಮಠಗಳ ಗುರುವರ್ಗದವರಿಗೂ ಆಮಂತ್ರಣ ನೀಡಲಾಗಿದೆ ಎಂದರು.
ಈ ಮಹತ್ಚದ ಬಹುಜನರ ಸಮಾವೇಶಕ್ಕೆ ಪ್ರಜಾಪ್ರಭುತ್ವ, ಜಾತ್ಯತೀತ, ಸಾಮಾಜಿಕ ನ್ಯಾಯ ಮುಖ್ಯವಾಗಿ ಭಾರತ ಸಂವಿಧಾನವನ್ನು ಎತ್ತಿ ಹಿಡಿಯುವ ಎಲ್ಲಾ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು.
ಸಮಾವೇಶದಲ್ಲಿ ಇಂಡಿಯಾವನ್ನು ಹಿಂದು ರಾಷ್ಟ್ರ ಮಾಡುವ ಹುನ್ನಾರ ನಿಲ್ಲಿಸಬೇಕು, ಸರಕಾರಿ ನೌಕರರು ಆರೆಸ್ಸೆಸ್ ಸೇರುವ ಆದೇಶ ರದ್ದಾಗಬೇಕು, ದೇಶಾದ್ಯಂತ ಸಾರ್ವಜತ್ರಿಕ ಜಾತಿ ಜನಗಣತಿ ನಡೆಯಬೇಕು, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಅಮಿತ್ ಶಾ ರಾಜೀನಾಮೆ ನೀಡಬೇಕು, ನಾಗರಿಕ ತಿದ್ದುಪಡಿ ಕಾಯ್ದೆ ವಾಪಾಸಾಗಬೇಕು, ಆರ್ಥಿಕ ಮೀಸಲಾತಿ ರದ್ದಾಗಬೇಕು ದಲಿತರು,ಮಹಿಳೆಯರು ಅದಿವಾಸಿಗಳ ಮೇಲಿನ ಆರ್ಎಸ್ಎಸ್ ದಬ್ಬಾಳಿಕ್ಕೆ ನಿಲ್ಲಬೇಕು, ನಾಲ್ಕು ಕಾರ್ಮಿಕ ಸಂಹಿತೆಗಳು ವಾಪಸ್ ಆಗಬೇಕು ಈ ಒತ್ತಾಯಗಳನ್ನು ಸಮಾವೇಶದ ಮೂಲಕ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಅಮರೇಶ, ರವೀಂದ್ರನಾಥ ಪಟ್ಟಿ, ನರಸಂಹಲು, ತಿಮ್ಮಣ್ಣ ವಕೀಲ್, ಜಂಬುನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.