ರಾಯಚೂರು | ಚಿರತೆ ದಾಳಿಗೆ ಆಕಳು ಸಾವು; ಗ್ರಾಮಸ್ಥರ ಆಕ್ರೋಶ
Update: 2025-02-14 22:03 IST
ರಾಯಚೂರು : ರಾಯಚೂರು ತಾಲೂಕಿನ ಮಲಿಯಾಬಾದ್ ಗೋಶಾಲೆಯಲ್ಲಿ ಚಿರತೆ ದಾಳಿಗೆ ಆಕಳು ಸಾವನ್ನಪಿದ ಘಟನೆ ಇಂದು ನಡೆದಿದೆ.
ಅನೇಕ ದಿನಗಳಿಂದ ಮಲಿಯಾಬಾದ್ ಗ್ರಾಮದಲ್ಲಿ ಚಿರತೆ ಓಡಾಡುತ್ತಿದ್ದು, ಗೋಶಾಲೆಯಲ್ಲಿದ್ದ ಆಕಳಿನ ಮೇಲೆ ಚಿರತೆ ದಾಳಿ ಮಾಡಿ ಸಾಯಿಸಿದ್ದು, ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಕಳೆದ ಮೂರು ತಿಂಗಳ ಹಿಂದೆಯೂ ಚಿರತೆ ಕಾಣಿಸಿಕೊಂಡು ಜಾನುವಾರುಗಳನ್ನು ಕೊಂದಿತ್ತು. ಆದರೂ ಇದುವರೆಗೆ ಕಾರ್ಯಾಚರಣೆ ಮಾಡಿ ಚಿರತೆಯನ್ನು ಸೆರೆಹಿಡಿದಿಲ್ಲ ಎಂದು ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಕಾರ್ಯಾಚರಣೆ ನಡೆಸಬೇಕು ಇಲ್ಲದಿದ್ದರೆ ಅರಣ್ಯ ಇಲಾಖೆ ಸಚಿವರ ಗಮನಕ್ಕೆ ತರಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.