ರಾಯಚೂರು | ಬಸ್‌ನ ಚಕ್ರದಡಿ ಸಿಲುಕಿ ಸವಾರ ಮೃತ್ಯು
Update: 2025-09-12 21:58 IST
ರಾಯಚೂರು: ರಾಯಚೂರು ಜಿಲ್ಲೆಯ ಗಡಿ ಭಾಗದ ದೇವಸುಗೂರು ಸಮೀಪದ ಹೈದರಾಬಾದ್ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಬಸ್ ನ ಚಕ್ರದಡಿ ಸಿಲುಕಿ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ಮೃತರನ್ನು ರಾಯಚೂರು ತಾಲೂಕಿನ ದೇವಸುಗೂರು ಗ್ರಾಮದ ನಿವಾಸಿ ಸೂಗುರೆಡ್ಡಿ (40) ಎನ್ನಲಾಗಿದೆ.
ಸೂಗುರೆಡ್ಡಿ ನೆರೆಯ ತೆಲಂಗಾಣದ ಮಕ್ತಲ್ ತಾಲೂಕಿಗೆ ಹೋಗಿ ದೇವಸುಗೂರಿಗೆ ವಾಪಸ್ ಬರುವಾಗ ಆತನ ಬೈಕ್ ನಿಯಂತ್ರಣ ತಪ್ಪಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ನ ಮುಂಭಾಗದ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಘಟನೆ ಬಳಿಕ ರಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದು, ಕೃಷ್ಣ ಮಂಡಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.