ರಾಯಚೂರು | ಸಿಂಧನೂರಿನಲ್ಲಿ ಯುವಕನ ಕೊಲೆ ಪ್ರಕರಣ : ಆರೋಪಿಯ ಬಂಧನ
Update: 2025-11-10 21:32 IST
ರಾಯಚೂರು: ಹಣದ ವಿಚಾರಕ್ಕೆ ಸಿಂಧನೂರು ತಾಲೂಕಿನ ಇಂದಿರಾನಗರ ಖಬರಸ್ತಾನದ ಬಳಿಯಲ್ಲಿ ನಡೆದ ಯುವಕನ ಕೊಲೆಗೆ ಸಂಬಂಧಿಸಿದಂತೆ ಸಿಂಧನೂರು ನಗರ ಠಾಣೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ರಾಜಾ ಬಂಧಿತ ಆರೋಪಿ.
ಸಿಂಧನೂರಿನ ಆರ್ ಎಚ್ ಕ್ಯಾಂಪ್ ನ ನಿವಾಸಿಯಾದ ಪ್ರವಿರ ಸರ್ದಾರ (32) ನಾಪತ್ತೆಯಾಗಿದ್ದ. ಈ ಕುರಿತು ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನವೆಂಬರ್ 1 ರಂದು ಪ್ರವಿರ ಸರ್ದಾರ್ ಮೃತದೇಹ ಪತ್ತೆಯಾಗಿತ್ತು.
ಈ ಕುರಿತು ಸಿಂಧನೂರು ನಗರ ಠಾಣೆ ಇನ್ಸ್ ಪೆಕ್ಟರ್ ವೀರಾರೆಡ್ಡಿ ನೇತೃತ್ವದ ಪೊಲೀಸರು ತನಿಖೆ ನಡೆಸಿದ್ದರು. ಪ್ರವಿರ ಸರ್ದಾರ್ ಹಾಗೂ ಆರೋಪಿ ರಾಜಾ ಹಾಗೂ ಆತನ ಸ್ನೇಹಿತ ತಾಜ್ ನಡುವೆ ಹಣದ ವಿಚಾರಕ್ಕೆ ಜಗಳ ನಡೆದು ಕೊಲೆ ನಡೆದಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.