ರಾಯಚೂರು: ಮನೆ ಬೀಗ ಮುರಿದು ಚಿನ್ನ,-ಬೆಳ್ಳಿ ಹಣ ಕಳವು
Update: 2025-02-19 18:30 IST
ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ವಾರ್ಡ್ ನಂಬರ್ 03 ರ ಗಿರಿಜಾಶಂಕರ ಕಾಲನಿ ಯಲ್ಲಿ ಮನೆಯಲ್ಲಿನ ಹಣ, ಬಂಗಾರದ ಆಭರಣಗಳು ಹಾಗು ಬೆಳ್ಳಿಯ ಆಭರಣಗಳನ್ನು ಕಳ್ಳರು ದೋಚಿದ ಘಟನೆ ಬೆಳಕಿಗೆ ಬಂದಿದೆ.
ಮನೆಯ ಮಾಲಕ ಕುಮಾರ ಭಜಂತ್ರಿ ಕುಟುಂಬದವರು ಒಂದು ವಾರ ಊರಲ್ಲಿ ಇಲ್ಲದ್ದನ್ನು ಅರಿತ ಕಳ್ಳರು ಮನೆಯ ಬೀಗ ಮುರಿದು ಅಲ್ಮರಾದಲ್ಲಿದ್ದ ಚಿನ್ನ, ಬೆಳ್ಳಿ, ಹಾಗು ನಗದು ಹಣ, ಬೆಲೆ ಬಾಳುವ ರೇಶ್ಮೆ ಸೀರೆಗಳು ಸೇರಿದಂತೆ ಸುಮಾರು 1.5 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಸ್ಥಳಕ್ಕೆ ಸ್ಥಳೀಯ ಠಾಣೆಯ ಪಿಎಸ್ ಐ ಅಮರೇಗೌಡ ಗಿಣಿವಾರ ಹಾಗು ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿದ್ದು, ಕಳ್ಳರ ಪತ್ತೆಗೆ ತಂತ್ರ ರೂಪಿಸಿದ್ದಾರೆ.