×
Ad

ಸಿಂಧನೂರು | ಮುಖ್ಯನ್ಯಾಯಮೂರ್ತಿ ಸಿಜೆಐ ಮೇಲಿನ ದಾಳಿ ಖಂಡಿಸಿ ಬೃಹತ್ ಪ್ರತಿಭಟನೆ

Update: 2025-10-14 18:39 IST

ಸಿಂಧನೂರು: ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಯವರ ಮೇಲೆ ಕೋರ್ಟ್ ಕಲಾಪದ ವಿಚಾರಣೆ ವೇಳೆ ದಾಳಿಗೆ ಯತ್ನಿಸಿದ ಘಟನೆ ಖಂಡಿಸಿ ಮಂಗಳವಾರ ಸಂವಿಧಾನ ರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ನಗರದ ಎಪಿಎಂಸಿ ಗಣೇಶ ಗುಡಿಯಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಬಸವವೃತ್ತ, ಗಾಂಧಿವೃತ್ತದ ಮೂಲಕ ತಹಶೀಲ್ದಾರ್‌ ಕಚೇರಿ ಎದುರುಗಡೆಯ ಬಹಿರಂಗ ಸಭೆಯ ವೇದಿಕೆ ತಲುಪಿತು. ಮೆರವಣಿಗೆಯುದ್ದಕ್ಕೂ ಪ್ರತಿಭಟನಾಕಾರರು ಹಿಂದುತ್ವವಾದಿ, ಜಾತಿವಾದಿ ಸಂಘಟನೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ಮೇಲೆ ದಾಳಿ ನಡೆಸಿದ ದುಷ್ಕರ್ಮಿ ರಾಕೇಶ್ ಕಿಶೋರ್ ನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮುಖ್ಯ ನ್ಯಾಯಮೂರ್ತಿಯವರಿಗೆ ಹಾಗೂ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಕೋಮುದ್ವೇಷದ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕದಡುವ ಸಂಘಪರಿವಾರ ಮತ್ತು ಮತೀಯವಾದಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಪ್ರತಿಭಟನಾಕಾರರು ಆಗ್ರಹಿಸಿದರು.

ಹಿರಿಯ ಸಾಹಿತಿ ಶಿವಸುಂದರ ಮಾತನಾಡಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಗಳವರತ್ತ ಶೂ ಎಸೆದಿರುವ ಘಟನೆ ಆತಂಕಕಾರಿ. ಇದು ಪ್ರಜಾತಂತ್ರ, ಸಂವಿಧಾನ ಮೇಲೆ ಆದ ದಾಳಿಯಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರದ ಭಾಗವಾಗಿದೆ. ದೇಶದಲ್ಲಿ ಮತ್ತೆ ಮನುವಾದವನ್ನು ಶಾಸನವಾಗಿ ಮರುಸ್ಥಾಪಿಸುವ ಹುನ್ನಾರವಾಗಿದ್ದು, ಪ್ರತಿಯೊಬ್ಬ ಭಾರತೀಯರು ನ್ಯಾಯ ಮೂರ್ತಿ ಸಿಜೆಐ ಅವರ ಮೇಲೆ ನಡೆದ ದಾಳಿ ಖಂಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಗೊರಬಾಳ, ಡಿ.ಹೆಚ್.ಕಂಬಳಿ, ಡಿ.ಹೆಚ್.ಪೂಜಾರ್, ಎಸ್.ಎ.ಖಾದರ್ ಸುಭಾನಿ, ಬಾಬರ್ ಪಾಷಾ ವಕೀಲ, ಕೆ.ಜಿಲಾನಿಪಾಷಾ, ಹೆಚ್.ಎನ್.ಬಡಿಗೇರ, ಕರೇಗೌಡ ಕುರುಕುಂದಿ, ಎಂಎಸ್ ಶ್ರೀನಿವಾಸ, ಹೆಚ್.ಎಫ್.ಮಸ್ಕಿ, ಹುಸೇನ್ ಸಾಬ್, ಎಂ.ಗಂಗಾಧರ, ಬಸವರಾಜ ಬಾದರ್ಲಿ, ಬಿ.ಎನ್.ಯರದಿಹಾಳ, ನಿರುಪಾದಿ ಸಾಸಲಮರಿ, ನರಸಪ್ಪ, ಮೌನೇಶ ಜಾಲವಾಡಗಿ, ಶಪ್ಪುವುಲ್ಲಾಖಾನ್, ಫಯಾಜ್ ಪೀರಾ, ಸುರೇಶ ಗೊಬ್ಬರಕಲ್, ಡಾ.ವಸೀಮ್, ಅಲ್ಲಮಪ್ರಭು ಪೂಜಾರ, ನಾಗರಾಜ ಪೂಜಾರ್, ಚಿಟ್ಟಿಬಾಬು, ರಮೇಶ ಪಾಟೀಲ್ ಬೇರಗಿ, ಎಂ.ಡಿ.ನದೀ ಮುಲ್ಲಾ, ನಾರಾಯಣ ಬೆಳಗುರ್ಕಿ, ವಿಶ್ವನಾಥ ನಾಯಕ, ಮಲ್ಲಯ್ಯ ನಾಯಕ ವಕೀಲ, ವೀರಭದ್ರಗೌಡ ಅಮರಾಪುರ, ಶಂಕರ ಗುರಿಕಾರ, ಮೌಲಪ್ಪ ಮಾಡಶಿರವಾರ, ಪ್ರವೀಣ ಕುಮಾರ, ಅಮೀನ್ ಪಾಷಾ ದಿದ್ದಗಿ, ಬಸವರಾಜ ಗೋಡಿಹಾಳ ಸೇರಿದಂತೆ ದಲಿತ, ಪ್ರಗತಿಪರ, ಅಲ್ಪಸಂಖ್ಯಾತ, ವಿದ್ಯಾರ್ಥಿ ಯುವ ಜನ ಸಂಘಟನೆ ಹಾಗೂ ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News