×
Ad

ʼಅಧಿಕಾರ ಹಂಚಿಕೆʼಯ ಬಗ್ಗೆ ಚರ್ಚೆಯಾಗಿಲ್ಲ, ಅದೆಲ್ಲಾ ಊಹಾಪೋಹಗಳು : ಯತೀಂದ್ರ ಸಿದ್ದರಾಮಯ್ಯ

Update: 2025-10-12 12:20 IST

ರಾಯಚೂರು : ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ನಡೆದಿಲ್ಲ, ಅದೆಲ್ಲಾ ಊಹಾಪೋಹಗಳು. ಸಿಎಂ ಹುದ್ದೆಗೆ ನಮ್ಮ ಪಕ್ಷದಲ್ಲಿ ಅನೇಕರು ಇದ್ದಾರೆ. ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಊಹಾಪೋಹಗಳು ನಡೀತಿದೆ, ಇದು ಸತ್ಯವಲ್ಲ. ಡಿ.ಕೆ.ಶಿವಕುಮಾರ್‌ ಅವರು ಈ ಹಿಂದೆಯೂ ಅನೇಕ ಬಾರಿ ಹೇಳಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಬೀದರ್, ಯಾದಗಿರಿ, ಕೊಪ್ಪಳ ಸೇರಿ 4 ಜಿಲ್ಲೆಗಳ ಕುರುಬ ಸಮಾಜದವರಿಗೆ ಎಸ್‌ಟಿ ಮೀಸಲಾತಿ ನೀಡುವ ಬಗ್ಗೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ. ಇದು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುತ್ತದೆ, ಏನಾಗಲಿದೆ ಕಾದು ನೋಡಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News