×
Ad

ಪರುಪಲ್ಲಿ ಕಶ್ಯಪ್ ಜೊತೆಗಿನ ವೈವಾಹಿಕ ಸಂಬಂಧಕ್ಕೆ ಅಂತ್ಯ ಘೋಷಿಸಿದ ಸೈನಾ ನೆಹ್ವಾಲ್!

Update: 2025-07-15 08:00 IST

PC: x.com/business_today

ಹೈದರಾಬಾದ್: ಸಹ ಆಟಗಾರ ಪರುಪಲ್ಲಿ ಕಶ್ಯಪ್ ಜತೆಗಿನ ಏಳು ವರ್ಷಗಳ ವೈವಾಹಿಕ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಒಲಿಂಪಿಕ್ ಪದಕ ವಿಜೇತೆ ಹಾಗೂ ವಿಶ್ವದ ಮಾಜಿ ನಂಬರ್ ವನ್ ಆಟಗಾರ್ತಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಪ್ರಕಟಿಸಿದ್ದಾರೆ.

ಸೈನಾ ಅವರ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಿಂದ ಮಾಡಲಾದ ಕಿರು ಭಾವನಾತ್ಮಕ ಸಂದೇಶದಲ್ಲಿ ಇದರ ಸುಳಿವು ದೊರಕಿತ್ತು. "ಜೀವನ ಕೆಲವೊಮ್ಮೆ ನಮ್ಮನ್ನು ಭಿನ್ನ ದಿಕ್ಕಿನಲ್ಲಿ ಕರೆದೊಯ್ಯುತ್ತದೆ. ನಾವು ಪರಸ್ಪರರು ಶಾಂತಿ, ಪ್ರಗತಿ ಮತ್ತು ಶಮನವನ್ನು ಆಯ್ಕೆ ಮಡಿಕೊಂಡಿದ್ದೇವೆ. ನಮ್ಮ ಖಾಸಗೀತನವನ್ನು ಅರ್ಥಮಾಡಿಕೊಂಡು ಗೌರವಿಸಿರುವುದಕ್ಕೆ ಧನ್ಯವಾದಗಳು" ಎಂದಿದ್ದರು. ಬದುಕಿನಲ್ಲಿ ಪರಸ್ಪರರು ಭಿನ್ನ ದಾರಿ ಹಿಡಿದರೂ ಗೌರವಯುತವಾಗಿ ಅದು ಇರಬೇಕು ಎಂಬ ಅರ್ಥದಲ್ಲಿ ಸೈನಾ ಬರೆದಿದ್ದರು.

ಕಶ್ಯಪ್- ಸೈನಾ ಜೋಡಿ 2018ರಲ್ಲಿ ವೈವಾಹಿಕ ಬಂಧನಕ್ಕೆ ಒಳಗಾಗಿದ್ದರು. ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಜತೆಗೆ ತರಬೇತಿ ಪಡೆಯುತ್ತಿದ್ದ ವೇಳೆ ಇವರ ಮಧ್ಯೆ ಪ್ರೇಮಾಂಕುರವಾಗಿತ್ತು. ಸೈನಾ ವಿಶ್ವದ ನಂಬರ್ ವನ್ ಆಟಗಾರ್ತಿಯಾದರು ಹಾಗೂ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದರು. 2014ರ ಕಾಮನ್ವೆಲ್ತ್ ಕೂಟದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಕಶ್ಯಪ್ ಬೆಳಕಿಗೆ ಬಂದು, ಬಿಡಬ್ಲ್ಯುಎಫ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 10 ಆಟಗಾರರ ಪೈಕಿ ಸ್ಥಾನ ಪಡೆದಿದ್ದರು.

ಪರಸ್ಪರ ಸಹಮತದಿಂದ ಇದೀಗ ಈ ಜೋಡಿ ಬೇರ್ಪಟ್ಟಿದೆ. 35 ವರ್ಷದ ಸೈನಾ ಮೂಳೆ ಸವೆತದಂಥ ಸಮಸ್ಯೆಯಿಂದ ಬಳಲುತ್ತಿದ್ದು, ನಿವೃತ್ತಿ ಘೋಷಿಸುವ ಯೋಚನೆಯಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News