×
Ad

ಸಾಗರ | ಬೈಕ್ ಅಪಘಾತ; ಯುವಕ ಮೃತ್ಯು

Update: 2025-02-06 22:49 IST

ಸಾಗರ: ಬೈಕ್ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಕಾಸ್ಪಾಡಿ ಬಳಿ ನಡೆದಿದೆ.

ತ್ಯಾಗರ್ತಿಯ ಚಿಕ್ಕಬಿಲಗುಂಜಿ ಗ್ರಾಮದ ಪ್ರಜ್ವಲ್ (20) ಮೃತ ಯುವಕ. ತ್ಯಾಗರ್ತಿ ಮಾರಿಕಾಂಬಾ ಜಾತ್ರೆಗೆ ಮನೆಗೆ ಬಂದಿದ್ದ ಸಂಬಂಧಿಕರನ್ನು ಊರಿಗೆ ಬಿಟ್ಟು ವಾಪಾಸ್ ಆಗುವ ಸಂದರ್ಭದಲ್ಲಿ ಕಾಸ್ಪಾಡಿ ಬಳಿ ಬೈಕ್ ಅಪಘಾತಗೊಂಡ ಘಟನೆ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಕೂಡಲೇ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿರುವ ಬಗ್ಗೆ ತಿಳಿದುಬಂದಿದೆ.

ಮೃತನಿಗೆ ತಂದೆ, ತಾಯಿ ಮತ್ತು ಸಹೋದರ ಇದ್ದಾರೆ. ಈ ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News