ಹೊಸನಗರ : ಮನೆಗಳಿಂದ ಹಣ, ಚಿನ್ನಾಭರಣ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ
ಶಿವಮೊಗ್ಗ: ಮನೆಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ನಿವಾಸಿಗಳಾದ ಹನುಮಂತ ತೊಳೆಯಪ್ಪ ಕುಂಚಿಕೊರವರ (26) ಹಾಗೂ ಮಂಜುನಾಥ ಬಿಸುಕಲ್ಲೊಡ್ಡರ (36) ಬಂಧಿತ ಆರೋಪಿಗಳು.
ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ಮಾರ್ಗದರ್ಶನದಲ್ಲಿ ಹೊಸನಗರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಮೇಲ್ವಿಚಾರಣೆಯಲ್ಲಿ, ಸಬ್ ಇನ್ಸ್‌ಪೆಕ್ಟರ್ ಶಿವಾನಂದ ಕೋಳಿ, ಸಿಬ್ಬಂದಿಗಳಾದ ಎಎಸ್‌ಐ ಕುಮಾರ್ ಟಿ, ಶೇಖ್ ಅಮೀರ್ ಜಾನ್,ಹೆಚ್ ಸಿ ಗಳಾದ ಕಿರಣ್ ಕುಮಾರ್, ವಿಶ್ವನಾಥ್, ಪ್ರವೀಣ್ ಕುಮಾರ್, ಶಿವಕುಮಾರ್ ನಾಯ್ಕ್, ಪಿಸಿಗಳಾದ ರವಿಚಂದ್ರ, ಸುಜಯ್ ಕುಮಾರ್, ಪ್ರಜ್ವಲ್, ಸಚಿನ್, ಚಾಲಕ ಶಶಿಧರ್ ಅವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ :
ಆ.21ರಂದು ಹೊಸನಗರ ತಾಲೂಕು ನಗರ ಹೋಬಳಿಯ ಕಬಳೆ ಗ್ರಾಮದ ರಿಚರ್ಡ್ ಡಿಸೋಜಾ ಹಾಗೂ ಮಾಸ್ತಿಕಟ್ಟೆಯ ಶೇಷಾದ್ರಿ ಎಂಬುವರ ಮನೆಗಳಲ್ಲಿ ಕಳವು ಕೃತ್ಯ ನಡೆದಿತ್ತು.ರಿಚರ್ಡ್ ಡಿಸೋಜಾ ಮನೆಯಲ್ಲಿ31 ಗ್ರಾಂ ತೂಕದ 1,66,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 70,000 ನಗದು ಕಳವು ಮಾಡಲಾಗಿತ್ತು. ಶೇಷಾದ್ರಿಯವರ ಮನೆಯಲ್ಲಿ 28 ಗ್ರಾಂ ತೂಕದ 1,11,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 30,000 ನಗದು, 3,000 ರೂ. ಮೌಲ್ಯದ ಬೆಳ್ಳಿ ಆಭರಣ ಕಳವು ಮಾಡಲಾಗಿತ್ತು. ಈ ಕುರಿತಂತೆ ನಗರ ಪೊಲೀಸ್ ಠಾಣೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.