ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ :ಗೀತಾ ಶಿವರಾಜ್‌ಕುಮಾರ್
ಶಿವಮೊಗ್ಗ(ಸೆ.27):ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಗೀತಾ ಶಿವರಾಜ್‌ಕುಮಾರ್‌ಘೋಷಿಸಿದ್ದಾರೆ.
ನಗರದ ಬಂಜಾರ್ ಕನ್ವೆನ್ಷನ್ ಹಾಲ್‌ನಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ನಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು.
ಈ ಹಿಂದೆ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು, ಚುನಾವಣೆಗೆ ಸ್ಪರ್ಧಿಸಿದ್ದರೂ ಕೂಡ ಪಕ್ಷ ಸಂಘಟನೆಯಲ್ಲಿ ಜೊತೆಗೆ ಇರುತ್ತೇನೆ, ನಿಮ್ಮೊಂದಿಗೆ ಕೆಲಸ ಮಾಡುತ್ತೇನೆ, ಯಾವಾಗ ಕರೆದರೂ ನಾನು ಬರುತ್ತೇನೆ ಎಂದು ತಿಳಿಸಿದರು.
ನೂತನ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ವೇತಾ ಬಂಡಿಯವರನ್ನು ಅಭಿನಂದಿಸಿದರು. ಶ್ವೇತಾ ಬಂಡಿಯವರು ತಮ್ಮ ಚುನಾವಣೆಯ ಪ್ರಚಾರದಲ್ಲಿ ಶ್ರಮಿಸಿದ್ದಾರೆ ಎಂದ ಗೀತಾ ಅವರು, ಇಂದಿನ ಸಮಾವೇಶ ಖುಷಿ ತಂದಿದೆ ಎಂದರು.
ಮಹಿಳೆಯರು ಅಬಲೆಯರಲ್ಲ, ಅವರಿಗೆ ಎಲ್ಲಾ ಶಕ್ತಿಯಿದೆ. ಅವರು ಎಲ್ಲರನ್ನು ಜೊತೆಗೂಡಿಸಿಕೊಂಡು ಅವರು ಪಕ್ಷ ಸಂಘಟಿಸಲಿ. ನಾನು ಇನ್ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಆದರೆ ಪಕ್ಷದ ಎಲ್ಲರ ಜೊತೆಗೂ ದೃಢವಾಗಿ ಇರುತ್ತೇನೆ ಎಂದು ಪುನರುಚ್ಚರಿಸಿದರು.