×
Ad

ಸಾಗರ | ಕಳವು ಪ್ರಕರಣದ ಇಬ್ಬರು ಆರೋಪಿಗಳ ಸೆರೆ: ಸೊತ್ತು ವಶ

Update: 2024-02-17 11:01 IST

ಸಾಗರ, ಫೆ.17: ಇಲ್ಲಿನ ಶಿಕ್ಷಕರ ಬಡಾವಣೆಯ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೇಟೆ ಠಾಣೆ ಪೊಲೀಸರು ಕಳವಾದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿಗ್ಗಾಂವ್ ತಾಲೂಕಿನ ಸಾವದಗಾರ್ ಓಣಿಯಲ್ಲಿ ವಾಸವಿರುವ ಅಮೀರ್ ಖಾನ್ (42) ಹಾಗೂ ಬೆಳಗಾವಿಯ ಉಡಚಗಾವ್ ನಿವಾಸಿ ವಿಶಾಲ್ ನರಸಿಂಗ ಶೇರ್ಖಾನೆ (52) ಬಂಧಿತ ಆರೋಪಿಗಳು. ಬಂಧಿತರಿಂದ 84 ಸಾವಿರ ರೂ. ಮೌಲ್ಯದ ಚಿನ್ನ, ಬೆಳ್ಳಿ ವಸ್ತುಗಳು ಮತ್ತು ಕಳ್ಳತನಕ್ಕೆ ಬಳಸಿರು 2 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್ಪಿ ಗೋಪಾಲಕೃಷ್ಣ ತಿಮ್ಮಪ್ಪ ನಾಯ್ಕ್ ಮಾರ್ಗದರ್ಶನದಲ್ಲಿ, ಇನ್ ಸ್ಪೆಕ್ಟರ್ ಸೀತಾರಾಂ ನೇತೃತ್ವದಲ್ಲಿ ಸಬ್ ಇನ್ ಸ್ಪೆಕ್ಟರ್ ನಾಗರಾಜ್, ಸಿಬ್ಬಂದಿಯಾದ ರತ್ನಾಕರ್, ಮೆಹಬೂಬ್, ಕೃಷ್ಣಮೂರ್ತಿ, ವಿಶ್ವನಾಥ್, ವಿಕಾಸ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News