×
Ad

ಶಿವಮೊಗ್ಗ | ಅಡಿಕೆ ದಾಸ್ತಾನು ಮಳಿಗೆಗೆ ತೆರಿಗೆ ಅಧಿಕಾರಿಗಳಿಂದ ದಾಳಿ

Update: 2024-05-29 19:49 IST

ಶಿವಮೊಗ್ಗ : ಶಿವಮೊಗ್ಗ ವಿಭಾಗೀಯ ವ್ಯಾಪ್ತಿಯ ಜಾರಿ ಮತ್ತು ಜಾಗೃತಿ ದಳ ಹಾಗೂ ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಸುಮಾರು 40 ಅಧಿಕಾರಿಗಳ ತಂಡವು ಮಲೆನಾಡು ವಿಭಾಗ ವ್ಯಾಪ್ತಿಯ ಎಲ್ಲಾ ಅಡಿಕೆ ವರ್ತಕರ ವ್ಯಾಪಾರ ಗೋದಾಮು ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿ, ಲಕ್ಷಾಂತರ ಮೊತ್ತದ ಅಕ್ರಮ ಅಡಿಕೆ ವಹಿವಾಟು ದಾಸ್ತಾನು ಪತ್ತೆ ಹಚ್ಚಿ ದಂಡ ವಿಧಿಸಿರುವುದಾಗಿ ವರದಿಯಾಗಿದೆ.

ಈ ವಿಶೇಷ ಕಾರ್ಯಾಚರಣೆಯನ್ನು ಶಿವಮೊಗ್ಗದ ಮಲೆನಾಡು ವಿಭಾಗೀಯ ತೆರಿಗೆ ಜಾಗೃತಿ ದಳ ಹಾಗೂ ಸರಕು ಮತ್ತು ಸೇವಾ ತೆರಿಗೆಗಳ ಜಂಟಿ ಆಯುಕ್ತರುಗಳು ಹಾಗೂ ಉಪ ಆಯುಕ್ತರುಗಳ ನೇತೃತ್ವದಲ್ಲಿ ನಡೆಸಿದ್ದು, ಅಕ್ರಮವಾಗಿ ಅಡಿಕೆ ಸಂಗ್ರಹಿಸಿದ ವ್ಯಾಪಾರಿಗಳ ಮೇಲೆ ಜಿ.ಎಸ್ ಟಿ ಕಾಯ್ದೆ ನಿಯಮಾನುಸಾರ ಕ್ರಮ ಜರುಗಿಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News